ಕರ್ನಾಟಕ

karnataka

ETV Bharat / state

ಬೆಳಗಾವಿಯ ಬಿಮ್ಸ್​ ಒಪಿಡಿ ಬಂದ್​: ಹೊರ ರೋಗಿಗಳ ಪರದಾಟ

ಬೆಳಗಾವಿ ಬಿಮ್ಸ್​ ಕೋವಿಡ್​ ಆಸ್ಪತ್ರೆಯಾಗಿ ಬದಲಾಗಿರುವ ಹಿನ್ನೆಲೆ ಒಪಿಡಿ ಬಂದ್​ ಮಾಡಲಾಗಿದೆ. ಹೀಗಾಗಿ ಹೊರ ರೋಗಿಗಳು ಪರದಾಡುವಂತಾಗಿದೆ.

BIMS OPD Close
ಬಿಮ್ಸ್​ ಒಪಿಡಿ ಬಂದ್​

By

Published : Jul 24, 2020, 4:43 PM IST

ಬೆಳಗಾವಿ: ಬಿಮ್ಸ್​ ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಿರುವ ಹಿನ್ನೆಲೆ ಸಾಮಾನ್ಯ ರೋಗಿಗಳು ಪರದಾಡುವಂತಾಗಿದೆ.

ಬಿಮ್ಸ್​​ನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿರುವ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ಒಪಿಡಿ ಬಂದ್ ಮಾಡಲಾಗಿದೆ. ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳನ್ನು ಯಳ್ಳೂರು ಬಳಿಯ ಕೆಎಲ್‌ಇ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಕೇವಲ ತುರ್ತು ಚಿಕಿತ್ಸೆಯನ್ನು ಮಾತ್ರ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗೆ ಹೋಗೋಣ ಅಂದ್ರೆ, ಅಲ್ಲೂ ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಿಮ್ಸ್​ ಒಪಿಡಿ ಬಂದ್​ ಆಗಿ ರೋಗಿಗಳ ಪರದಾಟ

ತುರ್ತು ಚಿಕಿತ್ಸಾ ರೋಗಿಗಳ ಗಂಟಲು ದ್ರವದ ಮಾದರಿ ಪಡೆದು, ಚಿಕಿತ್ಸೆ ನೀಡಲಾಗುತ್ತದೆ. ನನ್ನ ತಮ್ಮ, ತಂದೆ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಂದೆ ಆರೋಗ್ಯ ಸ್ಥಿತಿ ಸಹ ಗಂಭೀರವಾಗಿದೆ. ತ್ವರಿತವಾಗಿ ಸ್ವಾಬ್​ ಪರೀಕ್ಷಾ ವರದಿ ಸಿಗುತ್ತಿಲ್ಲ ಎಂದು ರೋಗಿಯ ಸಂಬಂಧಿಯೊಬ್ಬರು ಸಂಕಷ್ಟ ತೋಡಿಕೊಂಡಿದ್ದಾರೆ.

ABOUT THE AUTHOR

...view details