ಚಿಕ್ಕೋಡಿ: ಹಂಡ ಕುದರಿ, ಪುಂಡ ಅರಣ್ಯಸಿದ್ದಗ್ ಚಾಂಗಭಲೋ, ಮಲ ಕಾರಿ ಸಿದ್ದಗ್ ಚಾಂಗಭಲೋ, ಬಿಳಿಗುಡಿ ಅರಣ್ಯಸಿದ್ದಗ್ ಚಾಂಗಭಲೋ... ಹೀಗೆ ಭಕ್ತಿಪರವಶರಾಗಿ ಘೋಷಣೆ ಕೂಗುತ್ತಾ ಪಲ್ಲಕ್ಕಿ ಮೇಲೆ ಭಂಡಾರ ತೂರುತ್ತ ಭಕ್ತಿಸೇವೆ ಸಲ್ಲಿಸುತ್ತಿದ್ದ ವರ್ಣಮಯ ದೃಶ್ಯ ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಕಂಡು ಬಂತು.
ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವ... ಭಕ್ತರ ಬಾಯಲ್ಲಿ ಚಾಂಗಭಲೋ - ಭಕ್ತಾದಿಗಳು
ಸುಕ್ಷೇತ್ರ ಕೇರೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವದ ಜರುಗಿತು. ಜಾತ್ರೆಯ ಕೊನೆ ದಿನ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಕೇರೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಐದು ದಿನಗಳ ಕಾಲ ವಿಜೃಂಭಣೆಯಿಂದ ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವ ಜರುಗಿತು. ಜಾತ್ರೆಯ ಕೊನೆ ದಿನ ಸಾವಿರಾರು ಭಕ್ತರು ಪಾಲ್ಗೊಂಡು ಪುನೀತರಾದರು. ರಾಜ್ಯ ಮಾತ್ರವಲ್ಲದೆ, ಮಹಾರಾಷ್ಟ್ರದಿಂದಲೂ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಪಲ್ಲಕ್ಕಿ ಮೇಲೆ ಭಂಡಾರ, ಉತ್ತತ್ತಿ, ಕೊಬ್ಬರಿ ತೂರಿ ಭಕ್ತಿ ಸಮರ್ಪಿಸಿದರು. ಹಳದಿ ಹಾಸಿಗೆ ಹಾಕಿದಂತೆ ಕಾಣುತ್ತಿದ್ದ ಇಡೀ ಪರಿಸರದಲ್ಲಿ ಡೊಳ್ಳು ವಾದನದ ಸದ್ದು ಮಾರ್ದನಿಸುತ್ತಿತ್ತು.
ದೇವರುಷಿ ಅವರಿಂದ ದೇವರ ನುಡಿಗಳನ್ನು ಆಲಿಸಲು ಭಕ್ತಸಾಗರವೇ ಕೇರೂರ ಗ್ರಾಮದಲ್ಲಿ ಸೇರಿತ್ತು.