ಚಿಕ್ಕೋಡಿ:ಕೃಷ್ಣ ನದಿಗೆ ನೀರು ಬಿಡುವ ವಿಚಾರವಾಗಿ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯೊಂದಿಗೆ ಚರ್ಚೆಗೆ ತೆರಳಿದ್ದಾಗಿ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ 'ಈಟಿವಿ ಭಾರತ'ಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ: ಊಹಾಪೋಹಕ್ಕೆ ತೆರೆ ಎಳೆದ ಶಾಸಕ ಶ್ರೀಮಂತ ಪಾಟೀಲ್ - ಶ್ರೀಮಂತ ಪಾಟೀಲ್
ವಾಡಿಕೆಯಂತೆ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಕೃಷ್ಣಾ ನದಿಗೆ ಹರಿದು ಬರಬೇಕಿದ್ದ ಎರಡು ಟಿಎಂಸಿ ನೀರು ಬಿಡಲು ವಿಳಂಬವಾಗಿದೆ ಆ ಕಾರಣಕ್ಕಾಗಿ ಬೆಂಗಳೂರಿಗೆ ತೆರಳಿದ್ದೇನೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದಾರೆ.
ಇಲ್ಲಿಯವರೆಗೂ ಪಕ್ಷ ತೊರೆಯುವ ವಿಚಾರ ಮಾಡಿಲ್ಲ, ನಮ್ಮ ಭಾಗದ ಜನರಿಗೆ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿದ್ದು ಮಹಾರಾಷ್ಟ್ರ ರಾಜ್ಯದ ಕ್ಯೊನಾ ಜಲಾಶಯದಿಂದ ನೀರು ಒದಗಿಸಲು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯೊಂದಿಗೆ ಚರ್ಚೆಗೆ ನಡೆಸಲು ತೆರಳಿದ್ದಾಗಿ ಶ್ರೀಮಂತ ಪಾಟೀಲ್ ಹೇಳಿದ್ದಾರೆ.
ನನ್ನ ಜೊತೆಗೆ ಜಮಖಂಡಿ ಶಾಸಕ ಆನಂದ ನೇಮಗೌಡ ಇದ್ದಾರೆ ಎಂದು ಸ್ಪಷ್ಟನೆ ನೀಡಿದ ಅವರು, ವಾಡಿಕೆಯಂತೆ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಕೃಷ್ಣಾ ನದಿಗೆ ಹರಿದು ಬರಬೇಕಿದ್ದ ಎರಡು ಟಿಎಂಸಿ ನೀರು ಬಿಡಲು ವಿಳಂಬವಾಗಿದೆ ಆ ಕಾರಣಕ್ಕಾಗಿ ಬೆಂಗಳೂರಿಗೆ ತೆರಳಿದ್ದೇನೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.