ಬೆಳಗಾವಿ:ಬೆಳಗಾವಿಯ ನಾಲ್ಕು ಕಡೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಭ್ರಷ್ಟ ಅಧಿಕಾರಿಗೆ ಶಾಕ್ ಕೊಟ್ಟಿದ್ದಾರೆ.
ಬೆಳಗಾವಿಯ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿ ಸುಭಾಷ್ ಉಪ್ಪಾರ ಅವರ ಮನೆ ಹಾಗೂ ಕಚೇರಿ ಹಾಗೂ ಸಂಬಂಧಿಕರ ಮೇಲೆ ದಾಳಿ ನಡೆಸಲಾಗಿದೆ.

ಎಸಿಬಿ ಎಸ್‌ಪಿ ಬಿ.ಎಸ್.ನೇಮಗೌಡರ ನೇತೃತ್ವದಲ್ಲಿ 30ಕ್ಕೂ ಅಧಿಕ ಸಿಬ್ಬಂದಿ ಏಕಕಾಲದಲ್ಲಿ ನಾಲ್ಕು ಕಡೆ ದಾಳಿ ಮಾಡಿದ್ದಾರೆ.
ಬೆಳಗಾವಿಯ ರುಕ್ಮಿಣಿ ನಗರದ ಮನೆ, ಕಚೇರಿ, ಬಾಡಿಗೆ ಮನೆ ಹಾಗೂ ಬಸವನ ಕುಡಚಿಯಲ್ಲಿರುವ ಅಳಿಯ ಸದಾನಂದ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸುಭಾಷ್ ಉಪ್ಪಾರ್ ಅವರು ಬೆಳಗಾವಿಯ ತೂಕ ಮತ್ತು ಮಾಪನ ಇಲಾಖೆಯ ಇನ್ವೆಸ್ಟಿಗೇಷನ್ ಯೂನಿಟ್ 3ರ ಅಸಿಸ್ಟೆಂಟ್ ಕಂಟ್ರೋಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.