ಬೆಳಗಾವಿ:ಪೊಲೀಸರ ಚೇಸ್ನಿಂದ ತಪ್ಪಿಸಿಕೊಳ್ಳಲು ಹೋಗಿ 9 ಜಾನುವಾರ ಹಾಗೂ 6 ಜನ ರೈತರು ಪ್ರಯಾಣಿಸುತ್ತಿದ್ದ ವಾಹನ ಪಲ್ಟಿಯಾಗಿದೆ.
ಪೊಲೀಸರ ಚೇಸ್ನಿಂದ ತಪ್ಪಿಸಿಕೊಳ್ಳಲು ಹೋಗಿ ಪಲ್ಟಿಯಾದ ವಾಹನ..! - ಬೆಳಗಾವಿ ನ್ಯೂಸ್
ಪೊಲೀಸರ ಚೇಸ್ನಿಂದ ತಪ್ಪಿಸಿಕೊಳ್ಳಲು ಹೋದಾಗ ವಾಹನವೊಂದು ಪಲ್ಟಿಯಾದ ಘಟನೆ ಬೈಲಹೊಂಗಲ ತಾಲೂಕಿನ ಹಲಕಿ ಕ್ರಾಸ್ನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದ ದನದ ಸಂತೆಗೆ ಜಾನುವಾರು ಮಾರಲು ಬಂದಿದ್ದ ಜಿಲ್ಲೆಯ ಹಿರೆಬಿದನೂರು ಹಾಗೂ ಚಿಕ್ಕ ಬಿದನೂರು ಗ್ರಾಮದ ರೈತರು ಸಂತೆಯಲ್ಲಿ ಜಾನುವಾರು ಮಾರದೇ, ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಪೊಲೀಸರು ನಿಲ್ಲುವಂತೆ ಸೂಚಿಸಿದ್ದಾರೆ. ಪೊಲೀಸರ ಮಾತಿಗೆ ಕ್ಯಾರೆ ಎನ್ನದ ವಾಹನ ಚಾಲಕ, ವಾಹನ ನಿಲ್ಲಿಸದೇ ಮುಂದೆ ಸಾಗಿದ್ದಾನೆ.
ಆಗ ಜಾನುವಾರು ಸಾಗಿಸುತ್ತಿದ್ದ ವಾಹನ ಓವರ್ ಟೇಕ್ ಮಾಡಲು ಪೊಲೀಸರು ಮುಂದಾಗಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಜಾನುವಾರು ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಮೂವರು ರೈತರಿಗೆ ಹಾಗೂ ಕೆಲ ಜಾನುವಾರುಗಳಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.