ಕರ್ನಾಟಕ

karnataka

ETV Bharat / state

ಬೆಳಗಾವಿ: ಹೆಂಡತಿ ಚುಡಾಯಿಸುತ್ತಿರುವುದನ್ನು ಪ್ರಶ್ನೆ ಮಾಡಿದ ಗಂಡನ ಬರ್ಬರ ಹತ್ಯೆ - ಹೆಂಡತಿ ಚುಡಾಯಿಸುತ್ತಿರುವುದನ್ನು ಪ್ರಶ್ನೆ ಮಾಡಿದ ಗಂಡ

ಪತ್ನಿ ಚುಡಾಯಿಸುತ್ತಿರುವುದನ್ನು ಪ್ರಶ್ನಿಸಿದ ಪತಿಯನ್ನ ಖದೀಮನೊಬ್ಬ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

belagavi
ಹೆಂಡತಿ ಚುಡಾಯಿಸುತ್ತಿರುವುದನ್ನು ಪ್ರಶ್ನೆ ಮಾಡಿದ ಗಂಡನ ಬರ್ಬರ ಹತ್ಯೆ

By

Published : Oct 31, 2022, 2:09 PM IST

ಬೆಳಗಾವಿ: ಹೆಂಡತಿಯನ್ನ ಚುಡಾಯಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯನ್ನು ಕಟ್ಟಿಗೆಯಿಂದ ಹೊಡೆದು, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಖಾನಾಪೂರದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಬಾಹೇರ್ ಗಲ್ಲಿಯ ನಿವಾಸಿ ಮಾರುತಿ ಜಾಧವ್ (40) ಕೊಲೆಯಾದ ವ್ಯಕ್ತಿ. ಪಕ್ಕದ ಮನೆಯ ಪ್ರಶಾಂತ್ ನಾರ್ವೇಕರ್ (35) ಹತ್ಯೆ ಮಾಡಿದ ಆರೋಪಿ. ಕಳೆದ ಕೆಲ ದಿನಗಳಿಂದ ಆರೋಪಿ ಪ್ರಶಾಂತ್, ಮಾರುತಿ ಪತ್ನಿಯನ್ನ ಚುಡಾಯಿಸುತ್ತಿದ್ದನಂತೆ.‌

ಇದನ್ನೂ ಓದಿ:ದರೋಡೆಗೆ ಬಂದು ಯಮನ ಪಾದ ಸೇರಿದ.. ಪಂಜಾಬ್​ ಬಂಕ್​ನಲ್ಲಿ ಲೂಟಿಕೋರನ ಹತ್ಯೆ

ಈ ಬಗ್ಗೆ ನಿನ್ನೆ ರಾತ್ರಿ ಮಾರುತಿ ಪ್ರಶ್ನೆ ಮಾಡಿದ್ದಕ್ಕೆ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾನೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details