ಚಿಕ್ಕೋಡಿ : ಕಾಲು ಜಾರಿ ಬಿದ್ದ ಕುದುರೆಗೆ ಕಟ್ಟಿಗೆಯಿಂದ ಹೊಡೆದು ಅಮಾನವೀಯತೆ ಪ್ರದರ್ಶಿಸಿದ ಘಟನೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.
ಕುದುರೆ ರೇಸ್ನಲ್ಲಿ ಸರಣಿ ಅಪಘಾತ... ಅಶ್ವ ಬಿದ್ದರೂ ಬಿಡದೆ ಥಳಿಸಿದ ಪಾಪಿ ಚಾಲಕ - Sangeshwara of Hookkari Taluk in Belgaum district
ರೇಸ್ನಲ್ಲಿ ಕಾಲು ಜಾರಿ ಬಿದ್ದ ಕುದುರೆಗೆ ಕಟ್ಟಿಗೆಯಿಂದ ಹೊಡೆದು ಅಮಾನವೀಯತೆ ಪ್ರದರ್ಶಿಸಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.
ಕುದುರೆ ರೇಸ್ನಲ್ಲಿ ಸರಣಿ ಅಪಘಾತ,ಅಶ್ವ ಬಿದ್ದರು ಬಿಡದೆ ಥಳಿಸಿದ ಚಾಲಕರು!
ಶಂಕರಲಿಂಗೇಶ್ವರ ಜಾತ್ರೆಯ ನಿಮಿತ್ತ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಓಟದ ಸಂದರ್ಭ ಒಂದಕ್ಕೊಂದು ಗಾಡಿಗಳು ಡಿಕ್ಕಿಯಾಗಿ ಕೆಳಗೆ ಬಿದ್ದ ಕುದುರೆ ಏಳಲಾಗದ ಸ್ಥಿತಿಗೆ ತಲುಪಿತ್ತು. ಆದರೂ ಕರುಣೆ ತೋರದ ಕುದುರೆ ಸವಾರ ಅದಕ್ಕೂ ಪ್ರಾಣವಿದೆ ಎಂಬುದನ್ನೂ ಲೆಕ್ಕಿಸದೇ ಕುದುರೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಸದ್ಯ ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.