ಬೆಳಗಾವಿ:ಪ್ರವಾಹದ ಭೀತಿಯಿಂದ ಸ್ಥಳಾಂತರಗೊಂಡಿದ್ದ 90 ವರ್ಷದ ವೃದ್ಧೆ ಕಾಳಜಿ ಕೇಂದ್ರದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ನಡೆದಿದೆ.
ರಾಮದುರ್ಗ ತಾಲೂಕಿನ ಹಿರೇಹಂಪಿಹೊಳಿ ಗ್ರಾಮದ ಗಂಗಮ್ಮ (90) ಮೃತ ವೃದ್ಧೆ. ಕಳೆದ ಬಾರಿ ಭೀಕರ ಪ್ರವಾಹದಲ್ಲಿ ಗಂಗಮ್ಮ ಮನೆ ಕಳೆದುಕೊಂಡಿದ್ದರು. ಈ ವೃದ್ಧೆ ಒಂದು ವರ್ಷದಿಂದ ಹಿರೇಹಂಪಿಹೊಳಿ ಗ್ರಾಮದ ದೇಗುಲದಲ್ಲಿ ವಾಸವಿದ್ದರು.
ವೃದ್ಧೆಗೆ ಅಂತಿಮ ನಮನ ಸಲ್ಲಿಸಿದ ತಹಶೀಲ್ದಾರ್ ಗಿರೀಶ್ ಸ್ವಾಧಿ ಪ್ರವಾಹದ ಭೀತಿಗೆ ವೃದ್ಧೆಯನ್ನು ತಾಲೂಕಾಡಳಿತ ಸುರೇಬಾನ ಪರಿಹಾರ ಕೇಂದ್ರಕ್ಕೆ ಶಿಫ್ಟ್ ಮಾಡಿತ್ತು. ಕಳೆದ ಐದು ದಿನಗಳಿಂದ ಸುರೇಬಾನ ಪರಿಹಾರ ಕೇಂದ್ರದಲ್ಲಿ ಪುತ್ರಿ ಸುಶೀಲಾ ಜೊತೆಗೆ ಗಂಗಮ್ಮ ವಾಸವಿದ್ದರು.
ತಾಯಿಯನ್ನು ಕಳೆದುಕೊಂಡು ವೃದ್ಧೆ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ರಾಮದುರ್ಗ ತಹಶೀಲ್ದಾರ್ ಗಿರೀಶ್ ಸ್ವಾಧಿ ಪರಿಹಾರ ಕೇಂದ್ರಕ್ಕೆ ಬಂದು ವೃದ್ಧೆಗೆ ಅಂತಿಮ ನಮನ ಸಲ್ಲಿಸಿದರು.