ಕರ್ನಾಟಕ

karnataka

ETV Bharat / state

ಕೊರೊನಾಗೆ 6 ಬಲಿ: ಬೆಳಗಾವಿಯಲ್ಲಿ ಎರಡು‌ ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ - Corona news

ಬೆಳಗಾವಿಯಲ್ಲಿ ಇಂದು ಕೊರೊನಾಗೆ ಆರು ಜನ ಬಲಿಯಾಗಿದ್ದಾರೆ. ಅಲ್ಲದೇ 163 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2149ಕ್ಕೆ ಏರಿಕೆಯಾಗಿದೆ.

ಬೆಳಗಾವಿ
ಬೆಳಗಾವಿ

By

Published : Jul 26, 2020, 8:02 PM IST

ಬೆಳಗಾವಿ:ಜಿಲ್ಲೆಯಲ್ಲಿ ಇಂದು ಕೊರೊನಾಗೆ ಆರು ಜನ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿಗೆ ಬಲಿಯಾದವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು ಹೊಸದಾಗಿ 163 ಜನರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಎಲ್ಲರನ್ನೂ ‌ಕೋವಿಡ್ ವಾರ್ಡ್ ಹಾಗೂ ಕೋವಿಡ್ ಸೆಂಟರ್​ಗೆ ಶಿಫ್ಟ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2149ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಕೋವಿಡ್ ವಾರ್ಡ್ ಹಾಗೂ ಕೋವಿಡ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದ 173 ಸೋಂಕಿತರು ಗುಣಮುಖರಾಗಿ ಏಕಕಾಲಕ್ಕೆ ಡಿಸ್ಚಾರ್ಜ್​​ ಆಗಿದ್ದಾರೆ.

ABOUT THE AUTHOR

...view details