ಬೆಳಗಾವಿ: ಗೋವಾದಿಂದ ನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 4.4 ಲಕ್ಷ ರೂ. ಮೌಲ್ಯದ ಸುಮಾರು 2 ಸಾವಿರ ಲೀಟರ್ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು, ಓರ್ವನನ್ನು ಬಂಧಿಸಿದ್ದಾರೆ.
ಗೋವಾದಿಂದ ಬೆಳಗಾವಿಗೆ ಸಾಗಿಸುತ್ತಿದ್ದ 4.4 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ - ಗೋವಾ ಮದ್ಯ
ಬೆಳಗಾವಿ ತಾಲೂಕಿನ ಕಿಣಯೇ ಸಮೀಪದ ಬಾಕನೂರು ಗ್ರಾಮದ ಬಳಿ ವಿಶೇಷ ಅಬಕಾರಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 2 ಸಾವಿರ ಲೀಟರ್ ಲಿಕ್ಕರ್, 6 ಲಕ್ಷ ರೂ. ಮೌಲ್ಯದ ವಾಹನ ಜಪ್ತಿ ಮಾಡಿದ್ದಾರೆ.
ಅಕ್ರಮ ಮದ್ಯ ವಶ
ಈ ಬಗ್ಗೆ ಅಬಕಾರಿ ಆಯುಕ್ತ ಜಯರಾಮೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಉಪಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದೆ. ಅಕ್ರಮ ಮದ್ಯ ಮಾರಾಟ ತಡೆಯಲು ವಿಶೇಷ ತಂಡಗಳನ್ನು ನೇಮಕ ಮಾಡಲಾಗಿದೆ. ಅಬಕಾರಿ ತಂಡ ಗೂಡ್ಸ್ ಗಾಡಿ ತಪಾಸಣೆ ಮಾಡಿದಾಗ 220 ಬಾಕ್ಸ್ನಲ್ಲಿ 4.40 ಲಕ್ಷ ರೂ. ಮೌಲ್ಯದ ಮದ್ಯ ಪತ್ತೆಯಾಗಿದೆ.
ಇದರ ಜೊತೆಗೆ 6 ಲಕ್ಷ ರೂ. ಮೌಲ್ಯದ ವಾಹನ ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಮಹಮ್ಮದ್ ಖಲಿಂ ಎಂಬ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.