ಅಥಣಿ(ಬೆಳಗಾವಿ): ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯ ದುರಂತದಲ್ಲಿ ನಾಲ್ಕು ಜನ ಸಹೋದರರು ದಾರುಣ ಅಂತ್ಯ ಕಂಡಿದ್ದಾರೆ. ಜೂನ್ 25ರಂದು ಗ್ರಾಮ ದೇವರ ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಹೋದರರು ಹಾಸಿಗೆ ತೊಳೆಯಲು ನದಿಯಲ್ಲಿ ಇಳಿದಾಗ ಓರ್ವ ಸಹೋದರ ನೀರಿಗೆ ಬಿದ್ದಿದ್ದು, ಅವನನ್ನು ರಕ್ಷಿಸಲು ಮೂರು ಜನ ಸಹೋದರರು ಮುಂದಾಗುತ್ತಿದ್ದಂತೆ ಅವರು ಕೂಡ ಆಯತಪ್ಪಿ ನೀರುಪಾಲಾಗಿದ್ದರು. ಜಿಲ್ಲಾಡಳಿತ ಕಳೆದ 40 ಗಂಟೆಗಳಿಂದ ಹುಡುಕಾಟ ನಡೆಸಿದ್ದು, ಇಂದು ಮೂವರು ಸೇರಿದಂತೆ ಒಟ್ಟು ನಾಲ್ಕು ಜನ ಸಹೋದರರ ಮೃತದೇಹವನ್ನು ಪತ್ತೆ ಹಚ್ಚಲಾಗಿದೆ.
ಕೃಷ್ಣಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ನಾಲ್ವರು ಸಹೋದರರ ಪೈಕಿ ಮಂಗಳವಾರ ಓರ್ವನ ಮೃತದೇಹ ಪತ್ತೆಯಾಗಿತ್ತು. ಇಂದು ಮತ್ತೆ ಮೂವರ ಶವಗಳು ದೊರೆತಿವೆ.
ಎನ್ಡಿಆರ್ಎಫ್ ಹಾಗೂ ಸ್ಕೂಬಾ ಡೈವಿಂಗ್ ಮತ್ತು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಸತತ ಹುಡುಕಾಟ ನಡೆಸಿದ್ದು, ಮಂಗಳವಾರದಂದು ಪರಶುರಾಮ್ ಗೋಪಾಲ ಬನಸೋಡೆ (24) ಎಂಬುವರ ಶವ ಪತ್ತೆಯಾಗಿತ್ತು. ಮೂರನೇ ದಿನವೂ(ಇಂದು) ಕಾರ್ಯಾಚರಣೆ ಮುಂದುವರೆಸಿದಾಗ ಮೂವರ ಮೃತದೇಹಗಳು ಪತ್ತೆಯಾಗಿವೆ. ಅವರನ್ನು ಧರೇಪ್ಪ ಗೋಪಾಲ ಬನಸೋಡೆ (29), ಸದಾಶಿವ ಬನಸೋಡೆ (22), ಶಂಕರ ಗೋಪಾಲ ಬನಸೋಡೆ (20) ಸಹೋದರರು ಎಂದು ಗುರುತಿಸಲಾಗಿದೆ. ನಾಲ್ವರು ಮಕ್ಕಳನ್ನು ಕಳೆದುಕೊಂಡ ತಾಯಿ ಹಾಗೂ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಈ ಘಟನೆಯಿಂದ ನೀರವ ಮೌನ ಆವರಿಸಿದೆ.
ಪರಿಹಾರಕ್ಕೆ ಗ್ರಾಮಸ್ಥರು ಪಟ್ಟು: