ಕರ್ನಾಟಕ

karnataka

ETV Bharat / state

'ಮಹಾ'ದಲ್ಲಿ ಮತ್ತೆ ವರುಣಾರ್ಭಟ: ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ

ಗಡಿ ಜಿಲ್ಲೆಯಲ್ಲಿ ‌ಮತ್ತೆ ಪ್ರವಾಹದ ಭೀತಿ ಎದುರಾಗಿದ್ದು ನಾಳೆ ಕೋಯ್ನಾ ಜಲಾಶಯ ಮೂಲಕ ನಾಳೆ‌ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಲಿದೆ. ಇದರಿಂದಾಗಿ ಕೃಷ್ಣಾ ನದಿ‌ಪಾತ್ರದ‌ ಜನರು ಸುರಕ್ಷಿತ ‌ಪ್ರದೇಶಕ್ಕೆ ಸ್ಥಳಾಂತರ‌ಗೊಳ್ಳುವಂತೆ ಬೆಳಗಾವಿ ‌ಎಸ್ಪಿ ಲಕ್ಷ್ಮಣ ‌ನಿಂಬರಗಿ‌ ಮನವಿ ‌ಮಾಡಿದ್ದಾರೆ.

ಮಲಪ್ರಭಾ ‌ನದಿ

By

Published : Sep 5, 2019, 1:28 PM IST

ಬೆಳಗಾವಿ : ಮಹಾರಾಷ್ಟ್ರದಲ್ಲಿ ಮತ್ತೆ ವರುಣನ ಅಬ್ಬರ ಆರಂಭವಾಗಿದ್ದು, ಗಡಿ ಜಿಲ್ಲೆಯಲ್ಲಿ ‌ಪ್ರವಾಹದ ಭೀತಿ ಎದುರಾಗಿದ್ದು ಜನರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಲಪ್ರಭಾ ‌ನದಿಗೆ 5 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ರಾಮದುರ್ಗ ಮತ್ತು ಸುರೇಬಾನ್ ಸಂಪರ್ಕ ಸೇತುವೆ ಜಲಾವೃತಗೊಂಡಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ರಾಮದುರ್ಗ ತಹಶೀಲ್ದಾರ್ ಬಸವರಾಜ ಮನವಿ ಮಾಡಿಕೊಂಡರು.

ಕೊಯ್ನಾ ಜಲಾಶಯ ಮೂಲಕ ನಾಳೆ‌ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ಕೃಷ್ಣೆಗೆ ನಾಳೆ 2 ಲಕ್ಷ ಕ್ಯೂಸೆಕ್‌ ನೀರು

ಕೊಯ್ನಾ ಜಲಾಶಯ ಮೂಲಕ ನಾಳೆ‌ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ‌ಆಗಲಿದ್ದು, ಕೃಷ್ಣಾ ನದಿ‌ಪಾತ್ರದ‌ ಜನರು ಸುರಕ್ಷಿತ ‌ಪ್ರದೇಶಕ್ಕೆ ಸ್ಥಳಾಂತರ‌ಗೊಳ್ಳುವಂತೆ ಬೆಳಗಾವಿ ‌ಎಸ್ಪಿ ಲಕ್ಷ್ಮಣ ‌ನಿಂಬರಗಿ‌ ಮನವಿ ‌ಮಾಡಿದ್ದಾರೆ.

ABOUT THE AUTHOR

...view details