ಬೆಳಗಾವಿ: ಶಾಸಕ ಉಮೇಶ್ ಕತ್ತಿ ಅವರ ಮನೆಗೆ ಅಭಯ್ ಪಾಟೀಲ್, ದುರ್ಯೋಧನ ಐಹೊಳೆ, ಮಹಾದೇವಪ್ಪ ದೊಡವಾಡ ಸೇರಿ 12 ಶಾಸಕರು ಊಟಕ್ಕೆ ಹೋಗಿದ್ದೆವು ಎಂದು ಶಾಸಕ ಅನಿಲ್ ಬೆನಕೆ ಹೇಳಿದರು.
ಉಮೇಶ್ ಕತ್ತಿ ಮನೆಗೆ 12 ಶಾಸಕರು ಹೋಗಿದ್ದೆವು: ಶಾಸಕ ಅನಿಲ್ ಬೆನಕೆ - Umesh katti
ಹಿರಿಯ ಶಾಸಕ ಉಮೇಶ್ ಕತ್ತಿ ಅವರು ತಮ್ಮ ಮನೆಯಲ್ಲಿ ಶಾಸಕರ ಔತಣಕೂಟ ಏರ್ಪಡಿಸಿದ್ದ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಮಾತನಾಡಿದ ಶಾಸಕ ಅನಿಲ್ ಬೆನಕೆ, ಉಮೇಶ್ ಕತ್ತಿ ಅವರ ಮೆನೆಗೆ 12 ಶಾಸಕರು ಹೋಗಿದ್ದೆವು. ಎಲ್ಲಿಯವರೆಗೆ ಹೋಟೆಲ್ ಬಂದ್ ಆಗಿರುತ್ತವೆಯೋ ಅಲ್ಲಿಯವರೆಗೆ ಮನೆಗೆ ಬನ್ನಿ ಎಂದಿದ್ದಾರೆ ಎಂದರು.
ಉಮೇಶ್ ಕತ್ತಿ ಮನೆಗೆ 12 ಜನ ಶಾಸಕರು ಹೋಗಿದ್ದೆವು: ಶಾಸಕ ಅನಿಲ್ ಬೆನಕೆ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಮೇಶ ಕತ್ತಿಯವರ ಮನೆಗೆ 12 ಶಾಸಕರು ಊಟಕ್ಕೆ ಹೋಗಿದ್ದು ನಿಜ. ಊಟ ಮುಗಿಸಿಕೊಂಡು ಆಗಲೇ ಎದ್ದು ಹೋರ ಬಂದಿದ್ದೇವೆ. ಕತ್ತಿ ಅವರು ಎಲ್ಲಿವರೆಗೂ ಹೋಟೆಲ್ಗಳು ಬಂದ್ ಆಗಿರುತ್ತವೆಯೋ ಅಲ್ಲಿವರೆಗೂ ಮನೆಗೆ ಊಟಕ್ಕೆ ಬನ್ನಿ ಎಂದು ಕರೆದಿದ್ದಾರೆ.
ಸಿಎಂ ಬದಲಾವಣೆ ಆಗುವ ಚರ್ಚೆಗಳೆಲ್ಲವೂ ಸುಳ್ಳು. ಅನುದಾನ ಸಿಗುತ್ತಿಲ್ಲಾ ಎಂಬುದರ ಚರ್ಚೆ ಬಹಳ ದಿನಗಳಿಂದಲೂ ಇದೆ. ಸರ್ಕಾರ ತೊಂದರೆಯಲ್ಲಿದೆ. ಹೀಗಾಗಿ, ಅನುದಾನ ಕೊರತೆ ಆಗುತ್ತಿದೆ ಎಂದು ಶಾಸಕ ಅನಿಲ ಬೆನಕೆ ಹೇಳಿದರು.