ಬೆಂಗಳೂರು:ಮನುಷ್ಯನ ನೆರಳು ಆತನಿಗೆ ಕಾಣುವುದು ಸಾಮಾನ್ಯ ಸಂಗತಿ. ಆದರೆ, ಇಂದು ಒಂದು ದಿನ ಮಾತ್ರ ಆ ನೆರಳು ಕಾಣಸಿಗಲಿಲ್ಲ. ಇಂತಹ ಅಚ್ಚರಿಯ ಸಂಗತಿಯನ್ನು ನೋಡಲು ಸಾಕಷ್ಟು ಜನರು ಜವಾಹರಲಾಲ್ ತಾರಾಲಯದಲ್ಲಿ ನೆರೆದು ಕೌತುಕಕ್ಕೆ ಸಾಕ್ಷಿಯಾದರು.
ಆಗಸದಲ್ಲಿ ಇವತ್ತು ಖಗೋಳದ ವಿಸ್ಮಯವಾದ ಶೂನ್ಯ ನೆರಳಿನ ದಿನದ ಕೌತುಕ ಆಸ್ವಾದಿಸಲು ಸಿಲಿಕಾನ್ ಸಿಟಿ ಮಂದಿ ಮಧ್ಯಾಹ್ನ 12.17ಕ್ಕೆ ತಾರಾಲಯದ ಆವರಣದಲ್ಲಿ ನೆರೆದಿದ್ದರು. ಸೂರ್ಯನು ನೇರವಾಗಿ ತಲೆಯ ಮೇಲೆ ಬಂದಿರುವ ಹಿನ್ನೆಲೆ ಯಾವುದೇ ಲಂಬವಾದ ವಸ್ತುವಿನ ನೆರಳು ಕಾಣಸಿಗಲಿಲ್ಲ. ಶೂನ್ಯ ನೆರಳಿನ ದಿನವನ್ನು ಕಣ್ತುಂಬಿಕೊಳ್ಳಲು ಯಾವುದೇ ಉಪಕರಣಗಳ ಬಳಕೆಯ ಮಾಡಲಾಗಲಿಲ್ಲ. ಈ ಸಮಯದಲ್ಲಿ ಯಾವುದೇ ವಸ್ತುವಿನ ನೆರಳು ಅಕ್ಕಪಕ್ಕ ಎಲ್ಲೂ ಬೀಳದಿರುವುದನ್ನು ಕಾಣಸಿಕ್ಕಿತು. ಈ ಅಪರೂಪದ ಕ್ಷಣಗಳು ಸಾರ್ವಜನಿಕರು ಕಣ್ತುಂಬಿಕೊಂಡರು.
ಇದನ್ನೂ ಓದಿ:ಮಾಯಕೊಂಡ, ಜಗಳೂರು ಕ್ಷೇತ್ರಗಳಲ್ಲಿ ಬಿಎಸ್ವೈ ಭರ್ಜರಿ ಪ್ರಚಾರ
ಶೂನ್ಯ ನೆರಳಿನ ದಿನ ಎಂಬುದು ಒಂದು ಅಪರೂಪದ ಖಗೋಳ ವಿದ್ಯಮಾನವಾಗಿದ್ದು, ಈ ಬಗ್ಗೆ ಜನರಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸಲು ರಾಜಭವನ ರಸ್ತೆಯ ಜವಾಹರ್ ನೆಹರು ತಾರಾಲಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಂಸ್ಥೆಯ ಆವರಣದಲ್ಲಿ ಶೂನ್ಯ ನೆರಳಿನ ದಿನದ ಅನುಭವವನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲ್ಗಲಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ಇದನ್ನೂ ಓದಿ:ಮೋದಿ, ಅಮಿತ್ ಶಾ ಗಿಂತ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ದೊಡ್ಡ ನಾಯಕರು: ಬಿ ಕೆ ಹರಿಪ್ರಸಾದ್