ಬೆಂಗಳೂರು: ನಾನೇ ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗುತ್ತಿದ್ದೇನೆ. ಫೆ.27ನೇ ತಾರೀಖು ನನಗೆ 80 ವರ್ಷ ತುಂಬುತ್ತದೆ. ಹೀಗಾಗಿ ಯಾವುದೇ ವೀರಶೈವ ಬಂದುಗಳು ಅಪಾರ್ಥ ಮಾಡಿಕೊಳ್ಳಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು, ವೀರಶೈವ, ಲಿಂಗಾಯತ ಮತಗಳು ಬಿಜೆಪಿಯಿಂದ ವಿಮುಖವಾಗೋ ವಿಚಾರವಾಗಿ ಪ್ರತಿಕ್ರಿಯಿಸುತ್ತ, ವೀರಶೈವ ಲಿಂಗಾಯತ ಬಂದುಗಳಲ್ಲಿ ಕೈ ಜೋಡಿಸಿ ಮನವಿ ಮಾಡುತ್ತೇನೆ. ನಾನೇ ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗುತ್ತಿದ್ದೇನೆ. ಫೆ.27ನೇ ತಾರೀಖು ನನಗೆ 80 ವರ್ಷ ಆಗ್ತಿದೆ. ಹೀಗಾಗಿ ಯಾವುದೇ ವೀರಶೈವ ಬಂಧುಗಳು ಅಪಾರ್ಥ ಮಾಡಿಕೊಳ್ಳಬಾರದು ಎಂದು ತಿಳಿಸಿದರು.
ಇದುವರೆಗೂ ನನಗೆ ಎಲ್ಲಾ ರೀತಿಯ ಸಹಕಾರ ಅವಕಾಶವನ್ನು ಪ್ರಧಾನಿ ಮೋದಿ, ಅಮಿತ್ ಷಾರವರು ಕೊಟ್ಟಿದ್ದಾರೆ. ನನಗೆ ಎಲ್ಲಾ ಬೆಂಬಲ ಕೊಟ್ಟು ಬಿಜೆಪಿ ಗೆಲ್ಲಿಸಬೇಕೆಂದು ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆ ಎಂದರು. 27ನೇ ತಾರೀಕು ಏರ್ಪೋರ್ಟ್ ಉದ್ಘಾಟನೆಗೆ ಪ್ರಧಾನಿ ಬರ್ತಿದ್ದಾರೆ. ನೀವೆಲ್ಲರೂ ಬನ್ನಿ. ನನ್ನ ಬಹಳ ವರ್ಷದ ಕನಸ್ಸು ನನಸ್ಸಾಗಿದೆ. ರಾಜ್ಯದ ಅಭಿವೃದ್ಧಿಗೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡಿದ್ದೇನೆ ಅನ್ನೊ ತೃಪ್ತಿ ಇದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ನಾನು ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆನೆ ಬಲ ಸಿಕ್ಕಿದಂತೆ ಆಗಿದೆ ಎಂದರು.