ಬೆಂಗಳೂರು :ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನಮಾನ ವಾಪಸ್ ನೀಡಿದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ನಾನೇ ಯಡಿಯೂರಪ್ಪಗೆ ಹೇಳೋಣ ಎಂದುಕೊಂಡಿದ್ದೆ. ನಾನು ಹೇಳುವ ಮೊದಲೇ ವಾಪಸ್ ಮಾಡಿದ್ದಾರೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದೊರೆಸ್ವಾಮಿ ಶ್ರದ್ಧಾಂಜಲಿ ಸಮಾರಂಭದ ನಂತರ ಸಚಿವರ ಖಾತೆ ಬಗೆಗಿನ ಅಸಮಾಧಾನ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು. ಸಚಿವ ಸ್ಥಾನ ಹಂಚಿಕೆ ಅವರ ಆಂತರಿಕ ವಿಚಾರ. ಇಷ್ಟು ಮಾತ್ರ ನಿಜ ಅನ್ನಿಸುತ್ತಿದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ.
ಬೊಮ್ಮಾಯಿ ಮುಖ್ಯಮಂತ್ರಿ ಮಾಡಿದಕ್ಕೂ ಅಸಮಾಧಾನವಿದೆ. ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಿದಕ್ಕೂ ಆಕ್ರೋಶವಿದೆ. ಯಾವಾಗ ಏನು ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಯಾವುತ್ತಾದರೂ ಒಂದು ದಿನ ಆಕ್ರೋಶ ಸ್ಫೋಟವಾಗಬಹುದು ಎಂದರು.