ಬೆಂಗಳೂರು: ಸಿಎಂ ಯಡಿಯೂರಪ್ಪ ಸಿಟಿ ರೌಂಡ್ಸ್ ಹೊರಟಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ನಗರ ಪ್ರದಕ್ಷಿಣೆ ನಡೆಸುತ್ತಿದ್ದಾರೆ.
ಸಿಟಿ ರೌಂಟ್ಸ್‌ಗೆ ಹೊರಟ ಮುಖ್ಯಮಂತ್ರಿ ಯಡಿಯೂರಪ್ಪ.. ಬಿಎಂಟಿಸಿ ವೋಲ್ವೋ ಬಸ್ನಲ್ಲೇ ನಗರ ಪ್ರದಕ್ಷಿಣೆ.. - ಸಿಎಂ ಸಿಟಿ ರೌಂಡ್ಸ್
ಇಂದು ಸಿಎಂ ಯಡಿಯೂರಪ್ಪ ಸಿಟಿ ರೌಂಡ್ಸ್‌ಗೆ ಹೊರಟಿದ್ದಾರೆ. ಬನ್ನೇರುಘಟ್ಟ ರಸ್ತೆ, ಜೆಡಿ ಮೌರ ಸಿಗ್ನಲ್, ವೈಟ್ ಫೀಲ್ಡ್, ಕುಂದ್ಲಹಳ್ಳಿ, ಸಿಲ್ಕ್ ಬೋರ್ಡ್, ನಾಗಾವಾರ, ಹೆಬ್ಬಾಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಿಎಂ ಪರಿಶೀಲನೆ ನಡೆಸಲಿದ್ದಾರೆ.
ಬೆಳಗ್ಗೆಯಿಂದ 9.30ಕ್ಕೆ ತಮ್ಮ ನಿವಾಸದಿಂದ ಸಿಟಿ ರೌಂಟ್ಸ್ ಆರಂಭಿಸಿರುವ ಸಿಎಂ ಯಡಿಯೂರಪ್ಪ ಮಧ್ಯಾಹ್ನ 12 ಗಂಟೆವರೆಗೂ ನಗರ ಪ್ರದಕ್ಷಿಣೆ ನಡೆಸಲಿದ್ದಾರೆ. ಬನ್ನೇರುಘಟ್ಟ ರಸ್ತೆ, ಜೆಡಿಮರ ಸಿಗ್ನಲ್, ವೈಟ್ ಫೀಲ್ಡ್, ಕುಂದ್ಲಹಳ್ಳಿ, ಸಿಲ್ಕ್ ಬೋರ್ಡ್, ನಾಗವಾರ, ಹೆಬ್ಬಾಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಿಎಂ ಪರಿಶೀಲನೆ ನಡೆಸಲಿದ್ದಾರೆ. ಗೃಹ ಕಚೇರಿ ಕೃಷ್ಣಾದಿಂದ ಹೊರಟಿರುವ ಬಿಎಸ್ವೈ ಅವರಿಗೆ ಸಚಿವ ಆರ್.ಅಶೋಕ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಸಂಸದರು, ಶಾಸಕರು, ಕಾರ್ಪೊರೇಟರ್ಗಳು ಹಾಗೂ ಹಿರಿಯ ಅಧಿಕಾರಿಗಳು ಸಾಥ್ ನೀಡಲಿದ್ದಾರೆ.
ಮೆಟ್ರೋ ಕಾಮಗಾರಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ, ತ್ಯಾಜ್ಯ ಸಮಸ್ಯೆ, ಟ್ರಾಫಿಕ್ ಪ್ಲಾಬ್ಲಂ ಸೇರಿದಂತೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ವಿಶೇಷವೆಂದರೆ ಬಿಎಂಟಿಸಿ ಬಸ್ನಲ್ಲಿ ಯಡಿಯೂರಪ್ಪ ಸಿಟಿ ರೌಂಡ್ಸ್ ಹೊರಟಿದ್ದಾರೆ. ಇದಕ್ಕಾಗಿ ಬಿಎಂಟಿಸಿ ವಜ್ರ ಬಸ್‌ನ ಮೊದಲೇ ಸಿದ್ದವಾಗಿತ್ತು.