ಆನೇಕಲ್:ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಇಂಡ್ಲವಾಡಿ ರಸ್ತೆಯ ಸ್ಟ್ರೈಡ್ಸ್ ಕಾರ್ಖಾನೆಯಲ್ಲಿ ನಡೆದಿದೆ.
ಇಂಡ್ಲವಾಡಿ ಮೂಲದ ಮಂಜುಳಾ (26) ಮೃತ ಕಾರ್ಮಿಕಳಾಗಿದ್ದಾಳೆ. ಕೊರೊನಾ ಭೀತಿ ಹಿನ್ನಲೆ ಹದಿನೈದು ದಿನ ಪಾಳಿಯಂತೆ ರಜೆಯಲ್ಲಿದ್ದು ನಿನ್ನೆಯಿಂದ ಸೇವೆಗೆ ಹಾಜರಾಗಿದ್ದಳು. ಎಂದಿನಂತೆ ಕೆಲಸಕ್ಕೆ ಹಾಜರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುಳಾ ಆರೋಗ್ಯವಾಗಿದ್ದಳು.
ಕಾರ್ಖಾನೆಯಲ್ಲಿ ಕುಸಿದು ಬಿದ್ದು ಮಹಿಳೆ ಸಾವು ಕಾರ್ಖಾನೆಯಲ್ಲಿ ಕೊರೊನಾ ನಿಯಮದಂತೆ ಪ್ರತಿ ಕಾರ್ಮಿಕರಿಗೆ ಪರೀಕ್ಷೆ ನಡೆಸುತ್ತಿದ್ದು. ನಿನ್ನೆಯೂ ಮಂಜುಳಾ ಪರೀಕ್ಷೆಗೆ ಒಳಗಾಗಿ ಯಾವುದೇ ಸಮಸ್ಯೆಯಿಲ್ಲದೇ ಕೆಲಸಕ್ಕೆ ಹಾಜರಾಗಿದ್ದಳು ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ ಕೆಲಸ ಮಾಡುವ ಸಂದರ್ಭದಲ್ಲಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಕಾರ್ಖಾನೆ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.