ಬೆಂಗಳೂರು: ಬೆಲ್ಜಿಯಂನಿಂದ ಆಮದು ಮಾಡಿಕೊಳ್ಳಲಾಗಿದ್ದ ಎಂಡಿಎಂಎ ಪಡೆಯಲು ಬಂದಿದ್ದ ಮಹಿಳೆಯನ್ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ನಗರದ ಇಂಟರ್ನ್ಯಾಷನಲ್ ಸ್ಕೂಲ್ವೊಂದರ ಈಜು ತರಬೇತುದಾರಳಾಗಿರುವ ಆರೋಪಿ ಮಹಿಳೆ ಬೆಲ್ಜಿಯಂನಿಂದ ಆಮದು ಮಾಡಿಕೊಂಡಿದ್ದ ಎಂಡಿಎಂಎ ಮಾತ್ರೆಗಳಿದ್ದ ಪಾರ್ಸಲ್ ಪಡೆಯಲು ನಿನ್ನೆ ಏರ್ ಕಾರ್ಗೋ ರಿಸೀವ್ ಸೆಂಟರ್ ಬಳಿ ಬಂದಿದ್ದಳು. ಆದರೆ, ಏರ್ ಕಾರ್ಗೋ ತಪಾಸಣೆ ವೇಳೆ ಪಾರ್ಸೆಲ್ನಲ್ಲಿ ಬರೋಬ್ಬರಿ 76. 2 ಲಕ್ಷ ಮೌಲ್ಯದ 5080 ಎಂಡಿಎಂಎ ಮಾತ್ರೆಗಳಿರುವುದು ಪತ್ತೆಯಾಗಿತ್ತು.