ಬೆಂಗಳೂರು:ನಿನ್ನೆ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ. ಉಳಿದವರ ಅರ್ಜಿ ವಿಚಾರಣೆ ಪ್ರಕ್ರಿಯೆ ಒಂದೇ ರೀತಿಯಾಗಿರುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ಅತೃಪ್ತರ ಅರ್ಜಿ ವಿಚಾರಣೆ ದ್ವೇಶಪೂರಿತವಲ್ಲ, ಟೀಕೆಗಳಿಗೆ ಡೋಂಟ್ ಕೇರ್: ಸ್ಪೀಕರ್ ರಮೇಶ್ ಕುಮಾರ್
ಅತೃಪ್ತ ಶಾಕರ ಅರ್ಜಿ ವಿಚಾರಣೆಯಲ್ಲಿ ಯಾರಿಗೂ ದ್ವೇಶ ಪೂರಿತವಾಗಿ ನಾನು ವ್ಯವಹರಿಸಿಲ್ಲ, ಎಲ್ಲಾ ಒಂದೇ ರೀತಿಯಾಗಿ ವಿಚಾರಿಸಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್
ದೊಮ್ಮಲೂರು ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎಲ್ಲಾ ಅರ್ಜಿಗಳು ಬೇರೆ ಬೇರೆ ರೀತಿ ಇವೆ. ಎಲ್ಲವನ್ನೂ ನ್ಯಾಯ ಸಮ್ಮತವಾಗಿ ನಿರ್ಧರಿಸಬೇಕು ಎಂದು ಮಾಹಿತಿ ನೀಡಿದರು.
ಜಾರಕಿಹೊಳಿ ಏನು ಹೇಳಿಕೊಂಡರೂ ನನಗೆ ಸಂತೋಷ. ನನ್ನ ಹತ್ರ ದೂರು ಬಂದಾಗ ವಿಚಾರ ಮಾಡ್ತೀನಿ. ಪರೋಕ್ಷವಾದ ಟೀಕೆಗಳಿಗೆ ಡೋಂಟ್ ಕೇರ್ ಎಂದ ಅವರು, ಯಾರು ತೃಪ್ತರು ಯಾರು ಅತೃಪ್ತರು ನನಗೆ ಗೊತ್ತಿಲ್ಲ. ನನ್ನ ಹತ್ರ ಪ್ರಕರಣ ಬಂದಿವೆ ನಾನು ಆದೇಶ ಮಾಡಿದ್ದೇನೆ ಅಷ್ಟೇ ಎಂದು ತಿಳಿಸಿದರು.
TAGGED:
ramesh kumar