ಬೆಂಗಳೂರು: ಪೈಪ್ ಒಳಗೆ ಹೋಗಿ ಪೈಪ್ ಸ್ಥಿತಿಯನ್ನು ಕ್ಯಾಮರಾ ಮೂಲಕ ಚಿತ್ರೀಕರಿಸುವ ಅಥವಾ ಪೈಪ್ ಒಡೆದು ನೀರು ಪೋಲಾಗುತ್ತಿರುವ ಸ್ಥಳ ಗುರುತಿಸುವ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ಬಾಲ್ಗಳ ಖರೀದಿಗೆ ಜಲಮಂಡಳಿ ಚಿಂತನೆ ನಡೆಸಿದೆ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದರು.
ನೀರು ಪೋಲು ತಡೆಯಲು ಸ್ಮಾರ್ಟ್ಬಾಲ್ ಖರೀದಿಗೆ ಜಲಮಂಡಳಿ ಚಿಂತನೆ: ತುಷಾರ್ ಗಿರಿನಾಥ್ - ಬೆಂಗಳೂರು ಲೆಟೆಸ್ಟ್ ನ್ಯೂಸ್
ಕಾವೇರಿ ನೀರು ಪೂರೈಕೆಯ ವಿವಿಧ ಹಂತಗಳ ಪೈಪ್ಲೈನ್ಗಳಲ್ಲಿ ಶೇ. 40 ರಿಂದ 50ರಷ್ಟು ನೀರು ಪೋಲಾಗುತ್ತಿದ್ದು, ತಂತ್ರಜ್ಞಾನ ಬಳಸಿ ಪೈಪ್ಲೈನ್ಗಳ ದೋಷ ಪತ್ತೆ ಹಚ್ಚಿ ದುರಸ್ತಿ ಮಾಡಲು ಸಾಧ್ಯವಿದೆ. ಇದಕ್ಕಾಗಿ ಪೈಪ್ ಒಡೆದು ನೀರು ಪೋಲಾಗುತ್ತಿರುವ ಸ್ಥಳ ಗುರುತಿಸುವ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ಬಾಲ್ಗಳ ಖರೀದಿಗೆ ಜಲಮಂಡಳಿ ಚಿಂತನೆ ನಡೆಸಿದೆ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮುನ್ಸಿಪಾಲಿಕಾ ಸಮ್ಮೇಳನಕ್ಕೆ ಭೇಟಿ ನೀಡಿದ್ದ ವೇಳೆ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಪೂರೈಕೆಯ ವಿವಿಧ ಹಂತಗಳ ಪೈಪ್ಲೈನ್ಗಳಲ್ಲಿ ಶೇ. 40 ರಿಂದ 50ರಷ್ಟು ನೀರು ಪೋಲಾಗುತ್ತಿದ್ದು, ತಂತ್ರಜ್ಞಾನ ಬಳಸಿ ಪೈಪ್ಲೈನ್ಗಳ ದೋಷ ಪತ್ತೆ ಹಚ್ಚಿ ದುರಸ್ತಿ ಮಾಡಲು ಸಾಧ್ಯವಿದೆ ಎಂದರು.
ಸ್ಮಾರ್ಟ್ ಬಾಲ್ನಂತಹ ತಂತ್ರಜ್ಞಾನ ಹೆಚ್ಚು ವೆಚ್ಚದ್ದಾಗಿದ್ದು, ಇದಕ್ಕೆಂದೇ ಜಲಮಂಡಳಿ ಕಳೆದ ವರ್ಷದ ಬಜೆಟ್ನಲ್ಲಿ 10 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಯಾವ ಟೆಂಡರ್ದಾರರೂ ಮುಂದೆ ಬಾರದ ಕಾರಣ ಅನುದಾನ ಹಾಗೆ ಉಳಿದಿದೆ. ಈ ಬಾರಿಯೂ ಅನುದಾನ ಮೀಸಲಿಡಲಾಗುವುದು. ಆದ್ರೆ ಈಗ ಕಡಿಮೆ ವೆಚ್ಚದ ಸ್ಮಾರ್ಟ್ಬಾಲ್ ಸಿದ್ಧವಾಗಿದ್ದು, ಅದನ್ನು ಖರೀದಿಗೆ ಮಂಡಳಿ ಚಿಂತನೆ ನಡೆಸಿದೆ ಎಂದರು.