ಕರ್ನಾಟಕ

karnataka

By

Published : Jan 28, 2020, 10:11 AM IST

ETV Bharat / state

ದೇವರಿಗೊಂದು ಪೂಜಾರಪ್ಪನಿಗೊಂದು ಹುಂಡಿ: ಭಗವಂತನಿಗೆ ಪಂಗನಾಮ ಹಾಕ್ತಿದ್ದ ಅರ್ಚಕನ ಸ್ಥಿತಿ ಏನಾಯ್ತು?

ದೇವರ ಆರಾಧನೆ ಮಾಡುವ ಇಲ್ಲೊಬ್ಬ ಪೂಜಾರಿ ದೇವರಿಗೆ ವಂಚನೆ ಎಸಗಿರುವ ಪ್ರಕರಣ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

Villagers Protest on Fraud, Villagers Protest on Fraud Priest, Villagers Protest on Fraud Priest in Bangalore, ವಂಚನೆ ಪೂಜಾರಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ, ಬೆಂಗಳೂರಿನಲ್ಲಿ ವಂಚನೆ ಪೂಜಾರಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ, ವಂಚನೆ ಪೂಜಾರಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಸುದ್ದಿ,
ಭಗವಂತನಿಗೆ ಪಂಗನಾಮ ಹಾಕ್ತಿದ್ದ ಅರ್ಚಕನ ಸ್ಥಿತಿ ಏನಾಯ್ತು ಗೊತ್ತ

ಬೆಂಗಳೂರು​:ಜನರನ್ನು ಯಾಮಾರಿಸಿ ದೇವರ ಬಗೆಗಿನ ಭಕ್ತರ ನಂಬಿಕೆಯನ್ನೇ ಬಂಡವಾಳವಾಗಿಸಿ ವಂಚಿಸುತ್ತಿದ್ದ ಪೂಜಾರಿ ವಿರುದ್ಧ ಗ್ರಾಮಸ್ಥರು ತಿರುಗಿ ಬಿದ್ದಿರುವ ಘಟನೆ ಬಿಳೇಕಳ್ಳಿಯ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ದೇವಸ್ಥಾನದಲ್ಲಿ ಈ ಪೂಜಾರಪ್ಪ ತನ್ನದೇ ಆದ ಪ್ರತ್ಯೇಕ ಹುಂಡಿ ಇಟ್ಟಿದ್ದನಂತೆ. ಇದನ್ನು ಕಂಡು ಊರಿನ ಜನರು ಮುಜರಾಯಿ ಇಲಾಖೆಗೆ ದೂರು ನೀಡಿದ್ದರು. ಇಲಾಖೆ ಅಧಿಕಾರಿಗಳು ಈ ಬಗ್ಗೆ ಒಮ್ಮೆ ಪರಿಶೀಲಿಸಿ ದೂರು ನಿಜವೆಂದು ಗೊತ್ತಾದರೂ ಸುಮ್ಮನಾಗಿದ್ದರು ಅನ್ನೋದು ಗ್ರಾಮಸ್ಥರ ಆರೋಪ.

ಭಗವಂತನಿಗೊಂದು ಪೂಜಾರಪ್ಪನಿಗೊಂದು ಹುಂಡಿ!

ಪೂಜಾರಪ್ಪ ತನ್ನದೇ ಆದ ಹುಂಡಿಯನ್ನು ಇಟ್ಟಿದ್ದರಿಂದ ಇಡೀ ಗ್ರಾಮವೇ ಈತನ ವಿರುದ್ಧ ತಿರುಗಿ ನಿಂತಿದೆ. ಪ್ರತ್ಯೇಕ ಹುಂಡಿಯ ವಿಚಾರ ಎಲ್ಲರಿಗೂ ಗೊತ್ತಾಗಿದ್ದು, ಈ ಬಗ್ಗೆ ಪಂಚಾಯಿತಿ ಕೂಡ ನಡೆದಿದೆ. ದೇವಸ್ಥಾನ, ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಅಲ್ಲಿನ ಅಧಿಕಾರಿಗಳೇ ಬಂದು ಈತನಿಗೆ ಎಚ್ಚರಿಕೆ ನೀಡಿದ್ದರು. ಆದ್ರೂ ಕೂಡ, ಈ ಆಸಾಮಿ ತನ್ನ ಚಾಳಿ ಬಿಟ್ಟಿರಲಿಲ್ಲ. ಇದನ್ನು ಗಮನಿಸಿದ ಜನರು ಸಾಕಷ್ಟು ಬಾರಿ ಎಚ್ಚರಿಕತೆ ನೀಡಿದ್ದರೂ ಆತ ಹಳೆಯ ಚಾಳಿ ಮುಂದುವರಿಸಿದ್ದ. ಹೀಗಾಗಿ ಗ್ರಾಮಸ್ಥರು ಪೂಜಾರಪ್ಪನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಮುಜರಾಯಿ ಇಲಾಖೆ ಈ ಪೂಜಾರಪ್ಪನನ್ನು ಈ ದೇವಸ್ಥಾನದಿಂದ ವಜಾಗೊಳಿಸುವುದಕ್ಕೆ ನಿರ್ಧರಿಸಿದೆ.

For All Latest Updates

ABOUT THE AUTHOR

...view details