ಬೆಂಗಳೂರು:ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದ ಮುಂದೆ ಐಸಿಯು ಬೆಡ್ಗಾಗಿ ಕೊರೊನಾ ಸೋಂಕಿತ ವ್ಯಕ್ತಿಯನ್ನು ಕರೆತಂದು ಹೈಡ್ರಾಮಾ ಮಾಡಿದ ಹಿನ್ನೆಲೆ ಕುಮಾರ ಪಾರ್ಕ್ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ.
ಬೆಳಗ್ಗೆ ಸೋಂಕಿತನ ಪತ್ನಿ ಪ್ರತಿಭಟನೆ: ಸಿಎಂ ನಿವಾಸದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ! - ಸಿಎಂ ನಿವಾಸ
ಕೊರೊನಾ ಸೋಂಕಿತ ವ್ಯಕ್ತಿಯನ್ನು ಕರೆತಂದು ಸಿಎಂ ಬಿಎಸ್ವೈ ನಿವಾಸದ ಮುಂದೆ ಬೆಡ್ಗಾಗಿ ಪಟ್ಟು ಹಿಡಿದಿದ್ದ ಹಿನ್ನೆಲೆ ಯಡಿಯೂರಪ್ಪ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಂದ್ ಮಾಡಲಾಗಿದೆ.
ಬೆಡ್ ಸಿಗದವರು ಸಿಎಂ ನಿವಾಸಕ್ಕೆ ಬರಬಹುದು ಎನ್ನುವ ಕಾರಣಕ್ಕಾಗಿ ಇಡೀ ರಸ್ತೆಯನ್ನೇ ಬಂದ್ ಮಾಡಲಾಗಿದೆ. ರೇಸ್ ಕೋರ್ಸ್ ರಸ್ತೆಯಿಂದ ಶಿವಾನಂದ ವೃತ್ತದ ಕಡೆಗಿನ ಮಾರ್ಗವನ್ನು ಮುಚ್ಚಲಾಗಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಿಎಂ ನಿವಾಸಕ್ಕೆ ತೆರಳುವ ಎರಡೂ ಬದಿಯ ರಸ್ತೆಯನ್ನು ಬ್ಯಾರಿಕೇಡ್ ಹಾಕು ಮುಚ್ಚಲಾಗಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಸಿಎಂ ನಿವಾಸದ ಬಳಿಯೂ ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದೆ. ಸೋಂಕಿತ ಪತಿಯನ್ನು ಆ್ಯಂಬುಲೆನ್ಸ್ನಲ್ಲೇ ಕರೆತಂದು ಸಿಎಂ ನಿವಾಸದ ಮುಂದೆ ಸೋಂಕಿತ ವ್ಯಕ್ತಿಯ ಪತ್ನಿ ಧರಣಿ ನಡೆಸಿ ಪತಿಯನ್ನು ಉಳಿಸುವಂತೆ ಗೋಳಾಡಿದ್ದರು. ಇದನ್ನು ಕಂಡ ಸಿಎಂ ಕಚೇರಿ ಸಿಬ್ಬಂದಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿದ್ದರಾದರೂ ಮಾರ್ಗ ಮಧ್ಯದಲ್ಲೇ ಸೋಂಕಿತ ವ್ಯಕ್ತಿ ಕೊನೆಯುಸಿರೆಳೆದಿದ್ದರು.