ಕರ್ನಾಟಕ

karnataka

ETV Bharat / state

ಗ್ರಾಮಕ್ಕೆ ನುಗ್ಗಿ ಹಲ್ಲೆ ನಡೆಸಿದ ಯುವಕರ ಗುಂಪು.. ಪ್ರಶ್ನಿಸಿದವರ ಮೇಲೆ ಮಚ್ಚು ಬೀಸಿದರು..

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಗ್ರಾಮಕ್ಕೆ ನುಗ್ಗಿದ 20 ಯುವಕರ ತಂಡವೊಂದು ಮನೆಯ ಬಳಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಲ್ಲದೆ ಕೇಳಲು ಬಂದ ಗ್ರಾಮಸ್ಥರ ಮೇಲೆ ಲಾಂಗ್, ಮಚ್ಚುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಗ್ರಾಮಕ್ಕೆ ನುಗ್ಗಿದ ಹಲ್ಲೆ ನಡೆಸಿದ ಯುವಕರ ಗುಂಪು

By

Published : Sep 20, 2019, 1:52 PM IST

ಆನೇಕಲ್:ರಾತ್ರಿ ಸಮಯದಲ್ಲಿ ಗ್ರಾಮಕ್ಕೆ ನುಗ್ಗಿದ 20 ಯುವಕರ ತಂಡವೊಂದು ಮನೆಯ ಬಳಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಲ್ಲದೆ ಕೇಳಲು ಬಂದ ಗ್ರಾಮಸ್ಥರ ಮೇಲೆ ಲಾಂಗ್, ಮಚ್ಚುಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

ಗ್ರಾಪಂ ಮಾಜಿ ಅಧ್ಯಕ್ಷ ಶ್ರೀರಾಮ ಎಂಬುವರ ಮನೆ ಬಳಿ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಜಖಂ ಮಾಡುತ್ತಿದ್ದ ವೇಳೆ ಅಕ್ಕಪಕ್ಕದ ಮನೆಯವರು ಕಾರಣ ಕೇಳಿದ್ದಕ್ಕೆ ಯುವಕರು ಲಾಂಗು-ಮಚ್ಚು ಹಾಗೂ ಚಾಕುವಿನಿಂದ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದಾರೆ. ನಂತರ ಶ್ರೀರಾಮ್ ತಮ್ಮ ಮನೆಯಲ್ಲಿದ್ದ ಪಿಸ್ತೂಲು ತಂದು ಗಾಳಿಯಲ್ಲಿ ಮೂರಕ್ಕು ಹೆಚ್ಚು ಗುಂಡು ಹಾರಿಸಿದ್ದಾರೆ. ಇದರಿಂದ ಭಯಭೀತರಾದ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ.

ಗ್ರಾಮಕ್ಕೆ ನುಗ್ಗಿದ ಹಲ್ಲೆ ನಡೆಸಿದ ಯುವಕರ ಗುಂಪು..

ರಾತ್ರಿ 10 ಗಂಟೆಯ ಸಮಯದಲ್ಲಿ ಘಟನೆ ನಡೆದಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಹಾಗೂ ಪೊಲೀಸರು ತಂಡ ಹಲ್ಲೆಗೊಳಗಾಗಿದ್ದ ಪ್ರಕಾಶ್ ರವರನ್ನು ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಎರಡು ದಿನಗಳ ಹಿಂದೆ ಗ್ರಾಮ ಪಂಚಾಯತ್‌ ಗ್ರಾಮ ಸಭೆಯೊಂದು ನಡೆದಿತ್ತು. ಈ ಸಂದರ್ಭದಲ್ಲಿ ಜಮೀನಿನ ವಿಚಾರಕ್ಕೆ ಶ್ರೀರಾಮ್ ಹಾಗೂ ರವಿ ಎಂಬುವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವಿಚಾರವಾಗಿ ರಾತ್ರಿ ಯುವಕರನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಶ್ರೀರಾಮ ಆರೋಪಿಸಿದ್ದಾರೆ. ಇನ್ನು, ಹಲ್ಲೆಗೊಳಗಾದ ಪ್ರಕಾಶ್ ಗಲಾಟೆ ಯಾಕೆ ಮಾಡುತ್ತಿದ್ದೀರಾ ಎಂದು ಕೇಳಲು ಹೋದಾಗ ಮಚ್ಚಿನಿಂದ ಹಲ್ಲೆ ಮಾಡಿರುವುದಾಗಿ ಹೇಳಿದ್ದಾರೆ.

ABOUT THE AUTHOR

...view details