ಕರ್ನಾಟಕ

karnataka

ETV Bharat / state

ಬೆಂಗಳೂರು ಹೊರವಲಯದ ಬೆಟ್ಟಗಳಲ್ಲಿ 3 ದಿನ ಚಾರಣಕ್ಕಿಲ್ಲ ಅವಕಾಶ - new year celebration

ಹೊಸ ವರ್ಷಾಚರಣೆಯ ನಿಮಿತ್ತ ಡಿಸೆಂಬರ್ 30ರಿಂದ ಜನವರಿ 1ರವರೆಗೆ ಶಿವಗಂಗೆ, ಸಿದ್ದರಬೆಟ್ಟ, ಅವತಿ ಬೆಟ್ಟ ಹಾಗು ಮಾಕಳಿ ಬೆಟ್ಟಗಳಲ್ಲಿ ಟ್ರಕ್ಕಿಂಗ್ ನಿಷೇಧಿಸಲಾಗಿದೆ.

ಮೂರು ದಿನ ಚಾರಣ ಬೆಟ್ಟಗಳು ಬಂದ್
ಮೂರು ದಿನ ಚಾರಣ ಬೆಟ್ಟಗಳು ಬಂದ್

By ETV Bharat Karnataka Team

Published : Dec 29, 2023, 7:10 PM IST

Updated : Dec 30, 2023, 4:23 PM IST

ಬೆಂಗಳೂರು ಹೊರವಲಯದ ಬೆಟ್ಟಗಳಲ್ಲಿ 3 ದಿನ ಚಾರಣಕ್ಕಿಲ್ಲ ಅವಕಾಶ

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯ ಮತ್ತು ಗ್ರಾಮಾಂತರದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. 31ರ ರಾತ್ರಿ ಹೊಸ ವರ್ಷಾಚರಣೆ ಆಚರಿಸುವ ಹಿನ್ನೆಲೆಯಲ್ಲಿ ನಂದಿಹಿಲ್ಸ್​ ರಸ್ತೆ, ನೆಲಮಂಗಲ, ಅನೇಕಲ್, ಹೊಸಕೋಟೆ ಸೇರಿದಂತೆ ಹಲವೆಡೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಮುಖ್ಯವಾಗಿ, ಡಿಸೆಂಬರ್ 30ರಿಂದ ಜನವರಿ 1ರವರೆಗೂ ಶಿವಗಂಗೆ, ಸಿದ್ದರಬೆಟ್ಟ, ಅವತಿ ಬೆಟ್ಟ, ಮಾಕಳಿ ಬೆಟ್ಟದಲ್ಲಿ ಟ್ರಕ್ಕಿಂಗ್ ನಿಷೇಧಿಸಲಾಗಿದೆ.

ಮ್ಯೂಸಿಕ್, ಡಿಜೆ ಕಾರ್ಯಕ್ರಮದ ಮೇಲೂ ನಿಗಾ ವಹಿಸಿದ್ದು, ರೆಸ್ಟೋರೆಂಟ್ ಮತ್ತು ಫಾರ್ಮ್ ಹೌಸ್‌ನಲ್ಲಿ ಮ್ಯೂಸಿಕ್ ಪ್ರೋಗ್ರಾಂ ಇದ್ದರೆ ಪೊಲೀಸರಿಗೆ ಮಾಹಿತಿ‌ ನೀಡುವಂತೆ ಸೂಚಿಸಲಾಗಿದೆ. ಸಂಭ್ರಮಾಚರಣೆಗೆ 31 ರಾತ್ರಿ 1ಗಂಟೆಯವರೆಗೂ ಮಾತ್ರ ಅನುಮತಿಯಿದ್ದು ಒಂದು ಗಂಟೆಯ ನಂತರ ಡಾಬಾ, ಪಬ್ ಎಲ್ಲವನ್ನೂ ಬಂದ್ ಮಾಡಲು ತಿಳಿಸಲಾಗಿದೆ. ಅನುಮತಿ ಇಲ್ಲದೆ ಪಾರ್ಟಿ ಆಯೋಜನೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಬೆಂಗಳೂರು ನಗರ ಸಂಪರ್ಕಿಸುವ ರಸ್ತೆಗಳಲ್ಲಿ ನಾಕಾಬಂಧಿಯಿದ್ದು, ಗಾಂಜಾ, ಡ್ರಗ್ ನಗರ ಪ್ರವೇಶಿಸದಂತೆ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಬಂದೋಬಸ್ತ್​:ಬೆಂಗಳೂರು ನಗರದಲ್ಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಅಗತ್ಯವಿರುವ ಕಡೆಗಳಲ್ಲಿ ಸೂಕ್ತ ಕಟ್ಟೆಚ್ಚರ ವಹಿಸಲಾಗುತ್ತಿದೆ. ಹೊಸ ವರ್ಷಾಚರಣೆಗೆ ಈಗಾಗಲೇ ಮಾರ್ಗಸೂಚಿ ನೀಡಲಾಗಿದೆ. ಡ್ರಿಂಕ್ ಆ್ಯಂಡ್ ಡ್ರೈವ್ ಟೆಸ್ಟ್ ಮಾಡಲಾಗುತ್ತಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್ ಪಾರ್ಕ್​ನಲ್ಲಿ ಬಂದೋಬಸ್ತ್ ಮಾಡಲಾಗುತ್ತಿದ್ದು ನಗರದ ವಿವಿಧೆಡೆ 400 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.

ಮೆಟ್ರೋ ರೈಲು ಸಂಚಾರ ಸಮಯ ವಿಸ್ತರಣೆ: ನೇರಳೆ ಮತ್ತು ಹಸಿರು ಮಾರ್ಗದ ನಮ್ಮ ಮೆಟ್ರೋ ರೈಲು ಸಂಚಾರದ ಸಮಯವನ್ನು ವಿಸ್ತರಿಸಲಾಗುತ್ತಿದೆ. ಕೊನೆಯ ರೈಲುಗಳು ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗಿನ ಜಾವ 1.30ಕ್ಕೆ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಿಂದ 2:15ಕ್ಕೆ ಎಲ್ಲ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ಹೊರಡಲಿದೆ. ಈ ವಿಸ್ತ್ರತ ಅವಧಿಯಲ್ಲಿ ರೈಲು ಸೇವೆಗಳು 15 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ರಾತ್ರಿ 11 ಗಂಟೆಯ ನಂತರ ಹಿಂದಿರುಗುವ ಪ್ರಯಾಣಿಕರು 50 ರೂ ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಅನ್ನು ಮುಂಚಿತವಾಗಿ ಖರೀದಿಸಬಹುದು.

ಇದನ್ನೂ ಓದಿ:ಮೈಸೂರು: ರಾತ್ರಿ 1 ಗಂಟೆಯವರೆಗೆ ಹೊಸ ವರ್ಷಾಚರಣೆಗೆ ಅವಕಾಶ

Last Updated : Dec 30, 2023, 4:23 PM IST

ABOUT THE AUTHOR

...view details