ಬೆಂಗಳೂರು :ಸಾರಿಗೆ ಸಂಸ್ಥೆಗಳ ಕಾರ್ಮಿಕರನ್ನ ಸರ್ಕಾರಿ ನೌಕರರನ್ನಾಗಿ ಖಾಯಂಗೊಳಿಸಬೇಕೆಂದು ನಡೆಸ್ತಿರೋ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ನೌಕರರ ಮುನಿಸು ತಪ್ಪಿಸಲು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದು ಮುಖಂಡರನ್ನ ಸಭೆಗೆ ಕರೆದಿದ್ದಾರೆ.
ಆದರೆ, ಇತ್ತ ನಮ್ಮನ್ನ ಮಾತುಕತೆಗೆ ಕರೆದಿಲ್ಲ ಎಂದು ಸಾರಿಗೆ ನೌಕರರ ಸಂಘದ ಮುಖಂಡ ಆನಂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ನೌಕರರನ್ನಾಗಿ ಮಾಡಿ ಅಂತಾ ಮುಷ್ಕರ ಮಾಡುತ್ತಿರುವ ಕಮಿಟಿಯನ್ನ ಈವರೆಗೆ ಸರ್ಕಾರ ಮಾತುಕತೆಗೆ ಕರೆದಿಲ್ಲ. ಆದರೆ, ಇಂದು ಅವಕಾಶವಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದೊಂದಿಗೆ ಸಭೆಗೆ ಕರೆದ್ರೆ ಮಾತುಕತೆಗೆ ನಾವು ಸಿದ್ದರಿದ್ದೀವಿ ಎಂದು ಆನಂದ್ ತಿಳಿಸಿದ್ದಾರೆ.