ಕರ್ನಾಟಕ

karnataka

ETV Bharat / state

ಸಾರಿಗೆ ಮುಷ್ಕರ: ಯುಗಾದಿ ಹಬ್ಬಕ್ಕೆ ಊರಿಗೆ ತೆರಳುವವರಿಗೆ ಕಾದಿದೆ ಸಂಕಷ್ಟ - ಯುಗಾದಿ ಹಬ್ಬ

ಕಳೆದ ವರ್ಷ ಲಾಕ್​ಡೌನ್ ಇದ್ದ ಕಾರಣ ಹಬ್ಬಕ್ಕೆ ಊರಿಗೆ ಹೋಗಲು ಸಾಧ್ಯವಾಗಲಿಲ್ಲ, ಈ ವರ್ಷ ಮುಷ್ಕರ ಇರುವುದರಿಂದ ಹೋಗಲು ಸಾಧ್ಯವಾಗುತ್ತಿಲ್ಲ. ಇನ್ನು ದುಬಾರಿ ದರ ನೀಡಿ ಖಾಸಗಿ ಬಸ್ ಸೇವೆಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಸಹ ಎದುರಾಗಿದೆ.

transport-employees-strike-hits-out-passengers-those-travelling-native-for-ugadi
ಯುಗಾದಿ ಹಬ್ಬಕ್ಕೆ ಊರಿಗೆ ತೆರಳುವವರಿಗೆ ಕಾದಿದೆ ಸಂಕಷ್ಟ

By

Published : Apr 9, 2021, 6:51 PM IST

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಏಪ್ರಿಲ್ 13ರಂದು ಯುಗಾದಿ ಹಬ್ಬದ ಪ್ರಯಾಣಕ್ಕೆ ಅಡಚಣೆ ಉಂಟಾಗುವ ಎಲ್ಲ ಸಾಧ್ಯತೆ ಕಂಡು ಬರುತ್ತಿದೆ.

ಏಪ್ರಿಲ್ 10 (ಎರಡನೇ ಶನಿವಾರ) ರಿಂದ ಸೋಮವಾರ ಹೊರತುಪಡಿಸಿ 13ನೇ ಮಂಗಳವಾರದ ವರೆಗೂ ಸರಣಿ ರಜೆಗಳು ಇರುವ ಕಾರಣ, ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಈಗಲೇ ಸಮಸ್ಯೆ ತಲೆದೂರಿದೆ.

ಪ್ರತಿ ವರ್ಷ ಯುಗಾದಿ ಹಬ್ಬಕ್ಕೆ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ದಿನನಿತ್ಯದ ಬಸ್ ಸಂಚಾರವು ಮುಷ್ಕರ ಹಿನ್ನೆಲೆ ಇಲ್ಲದಂತೆ ಆಗಿದೆ. ಕಳೆದ ವರ್ಷ ಲಾಕ್​ಡೌನ್ ಇದ್ದ ಕಾರಣ ಹಬ್ಬಕ್ಕೆ ಊರಿಗೆ ಹೋಗಲು ಸಾಧ್ಯವಾಗಲಿಲ್ಲ, ಈ ವರ್ಷ ಮುಷ್ಕರ ಇರುವುದರಿಂದ ಹೋಗಲು ಸಾಧ್ಯವಾಗುತ್ತಿಲ್ಲ. ಇನ್ನು ದುಬಾರಿ ದರ ನೀಡಿ ಖಾಸಗಿ ಬಸ್ ಸೇವೆಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಸಹ ಎದುರಾಗಿದೆ.

ವಿಶೇಷ ರೈಲು ಸೇವೆ!

ರಾಜ್ಯದಲ್ಲಿ ಸಾರಿಗೆ ಮುಷ್ಕರ ನಡೆಯುತ್ತಿರುವ ಹಿನ್ನೆಲೆ ಪರ್ಯಾಯ ಸಂಚಾರಕ್ಕೆ 18 ವಿಶೇಷ ರೈಲುಗಳನ್ನ ನೈರುತ್ಯ ರೈಲು ವಲಯ ನಿಯೋಜನೆ ಮಾಡಿದೆ.

ಯುಗಾದಿ ಹಬ್ಬಕ್ಕಾಗಿ ವಿಶೇಷ ರೈಲು ವೇಳಾಪಟ್ಟಿ

ABOUT THE AUTHOR

...view details