ಆನೇಕಲ್: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಹೃದಯವನ್ನು ಯಶಸ್ವಿಯಾಗಿ ಗ್ರೀನ್ ಕಾರಿಡಾರ್ ಮೂಲಕ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಪಘಾತದಲ್ಲಿ ಮಗನ ಮೆದುಳು ನಿಷ್ಕ್ರಿಯ: ಹೃದಯ ದಾನ ಮಾಡಿ ಮತ್ತೊಬ್ಬನ ಜೀವ ಉಳಿಸಿದ ಪೋಷಕರು! - bangalore news
ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಜೀವಂತ ಹೃದಯವನ್ನು ಗ್ರೀನ್ ಕಾರಿಡಾರ್ ಮೂಲಕ ಯಶಸ್ವಿಯಾಗಿ ರವಾನೆ ಮಾಡಲಾಗಿದೆ.
ಕಳೆದ 9 ನೇ ತಾರೀಖಿನಂದು ಪಿರಿಯಾಪಟ್ಟಣದ ಕೊಪ್ಪ ಬಳಿ ಮದನ್ ರಾಜ್ (22) ಎಂಬ ಯುವಕನ ಮೆದುಳು ರಸ್ತೆ ಅಪಘಾತದಿಂದಾಗಿ ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆ ಕುಟುಂಬಸ್ಥರು ಯುವಕನ ಅಂಗಾಂಗಗಳನ್ನು ದಾನ ಮಾಡಿದ್ದರು.ಅಂತೆಯೇ ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯದಲ್ಲಿ ತುಮಕೂರು ಮೂಲದ ನವೀನ್ (39) ಎಂಬಾತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಮದನ್ ರಾಜ್ ಹೃದಯವನ್ನು ನವೀನ್ ಅವರಿಗೆ ಕಸಿ ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯರು ಯಶಸ್ವಿಯಾಗಿದ್ದಾರೆ
ಈ ಜೀವಂತ ಹೃದಯವನ್ನು 2 ಗಂಟೆ 18 ನಿಮಿಷದಲ್ಲಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಯಶಸ್ವಿಯಾಗಿ ಸಾಗಿಸಲಾಯಿತು.