ಕರ್ನಾಟಕ

karnataka

ETV Bharat / state

ಗೃಹ ಪ್ರವೇಶದ ಮನೆಗೆ ನುಗ್ಗಿ ಮಂಗಳಮುಖಿಯರ ದುರ್ವರ್ತನೆ... - ಈಟಿವಿ ಭಾರತ ಕನ್ನಡ

ಗೃಹಪ್ರವೇಶದ ಮನೆಯೊಂದಕ್ಕೆ ಮಂಗಳಮುಖಿಯರು ನುಗ್ಗಿ ಹಣ ಕೊಡುವಂತೆ ಒತ್ತಾಯಿಸಿ ಮನೆಯವರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ.

KN_BNG
ಗೃಹಪ್ರವೇಶದ ಮನೆಗೆ ನುಗ್ಗಿ ಮಂಗಳಮುಖಿಯರ ದುರ್ವರ್ತನೆ

By

Published : Nov 12, 2022, 7:10 PM IST

ಬೆಂಗಳೂರು: ಗೃಹಪ್ರವೇಶದ ಮನೆಗೆ ನುಗ್ಗಿ ಮಂಗಳಮುಖಿಯರು ದಾಂಧಲೆ ನಡೆಸಿ ಹಣ ಕೊಡುವಂತೆ ಒತ್ತಾಯಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ಕನಕಪುರ ರಸ್ತೆಯ ಗುಬ್ಬಲಾಳದಲ್ಲಿ ನಡೆದಿದೆ.

ಹಣ ನೀಡಲು ನಿರಾಕರಿಸಿದ್ದಕ್ಕೆ ಬಟ್ಟೆ ಬಿಚ್ಚಲು ಮುಂದಾದ ಮಂಗಳಮುಖಿಯರು ದುರ್ವರ್ತನೆ ತೋರಿದ್ದು, ಯಾವ ಪೊಲೀಸ್ ಬಂದರೂ ಏನು ಮಾಡುತ್ತಾರೆ ಎಂದು ಆವಾಜ್ ಹಾಕಿ, ನಾವು ಹಣ ಪಡೆಯದೇ ಇಲ್ಲಿಂದ ಹೋಗಲ್ಲ ಎಂದು ಗುಂಡಾವರ್ತನೆ ತೋರಿದ್ದಾರೆಂದು ಮನೆಯವರು ಆರೋಪಿಸಿದ್ದಾರೆ.

ಮಂಗಳಮುಖಿಯರ ವರ್ತನೆಗೆ ಬೇಸತ್ತ ಮನೆ ಮಾಲೀಕ ವೆಂಕಟೇಶ್​ ಅಡಿಗ ಈ ಕುರಿತು ಟ್ವಿಟರ್​​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಸಿಎಂ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಹಾಗೂ ಕಮಿಷನರ್​ಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ:ಬೈಕ್ ಸವಾರನ ಸುಲಿಗೆ: ಮಂಗಳಮುಖಿಯ ಬಂಧನ

ABOUT THE AUTHOR

...view details