ಕರ್ನಾಟಕ

karnataka

ETV Bharat / state

ರಾಜಧಾನಿಯಲ್ಲಿ ಜಿಟಿ ಜಿಟಿ ಮಳೆ... ಟ್ರಾಫಿಕ್​ ಕ್ಲಿಯರ್ ಮಾಡಲು ಪೊಲೀಸರ ಹರಸಾಹಸ - ನಿವಾರ್​ ಚಂಡಮಾರುತ ಪರಿಣಾಮ ಮಳೆ

ಚೆನ್ನೈನಲ್ಲಿ ನಿವಾರ್ ಚಂಡಮಾರುತ ಸಂಭವಿಸಿದ್ದು, ಪರಿಣಾಮ ರಾಜಧಾನಿಯಲ್ಲಿ ಮಳೆಯಾಗುತ್ತಿದೆ. ಇದರಿಂದ ವಾಹನಗಳು ಸಂಚರಿಸಲು ಸಮಸ್ಯೆ ಉಂಟಾಗಿದ್ದು, ಟ್ರಾಫಿಕ್​ ಜಾಮ್​​ ದಟ್ಟವಾಗಿದೆ.

ರಾಜಧಾನಿಯಲ್ಲಿ ಜಿಟಿ ಜಿಟಿ ಮಳೆ
Traffic jam in Bangalore

By

Published : Nov 26, 2020, 1:22 PM IST

ಬೆಂಗಳೂರು:ನಿವಾರ್​ ಚಂಡಮಾರುತ ಪರಿಣಾಮ ಸಿಲಿಕಾನ್ ಸಿಟಿಯಲ್ಲಿ ಮುಂಜಾನೆಯಿಂದಲೇ ಜಿಟಿ ಜಿಟಿ ಮಳೆಯಾಗುತ್ತಿದ್ದು, ಟ್ರಾಫಿಕ್​ ಜಾಮ್​​ ಉಂಟಾಗಿದೆ.

ರಾಜಧಾನಿಯಲ್ಲಿ ಜಿಟಿ ಜಿಟಿ ಮಳೆ

ನಗರದ ಹೆಬ್ಬಾಳ, ಕೋರಮಂಗಲ,ಮಲ್ಲೇಶ್ವರಂ, ಮೆಜೆಸ್ಟಿಕ್ ಹೀಗೆ ಪ್ರಮುಖ ಸ್ಥಳದಲ್ಲಿ ಮಳೆ ಹಾಗೂ ಗಾಳಿ ಬೀಸುತ್ತಿದ್ದು, ಇದರಿಂದ ವಾಹನ ಸವಾರರರು ನಿಧಾನಗತಿಯಲ್ಲಿ ತೆರಳುವುದು ಅನಿವಾರ್ಯವಾಗಿದೆ. ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್​ ಉಂಟಾಗಿದ್ದು, ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾರೆ.

ಇನ್ನು ಕಾರ್ಮಿಕ ನೀತಿ‌ ಕಾಯ್ದೆ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಟೋಗಳು, ಇಂಡಸ್ಟ್ರಿಯಲ್ ನೌಕರರು ಪ್ರತಿಭಟನೆಗಿಳಿದಿದ್ದು, ಪರಿಣಾಮ ಮೆಜೆಸ್ಟಿಕ್ ಸುತ್ತಮುತ್ತ ಜನರು ಸಂಚರಿಸಲು ಪರದಾಡುತ್ತಿದ್ದಾರೆ.

ABOUT THE AUTHOR

...view details