ಬೆಂಗಳೂರು:ಈ ವರ್ಷದ ಮೊದಲ ಚಂದ್ರ ಗ್ರಹಣ ಶುಕ್ರವಾರ ಸಂಭವಿಸಲಿದೆ. ಆದ್ರೆ ಭಾರತದಲ್ಲಿ ಈ ಚಂದ್ರ ಗ್ರಹಣ ದರ್ಶನವಾಗುವುದಿಲ್ಲ. ಈ ವರ್ಷದ ಪ್ರಥಮ ಸೂರ್ಯ ಗ್ರಹಣ ಸಂಭವಿಸಿ 15 ದಿನ ಕಳೆದಿದೆ. ಇದರ ಬೆನ್ನಲ್ಲೇ ಚಂದ್ರ ಗ್ರಹಣ ಸಹ ಸಂಭವಿಸುತ್ತಿದೆ. ವೈಶಾಖ ಮಾಸದ ಹುಣ್ಣಿಮೆ ಆಗಿದ್ದು, ಈ ಸಂದರ್ಭ ಚಂದ್ರ ಗ್ರಹಣ ನಡೆಯಲಿದೆ.
ಪೆನಂಬ್ರಲ್ ಚಂದ್ರ ಗ್ರಹಣ:ಈ ವರ್ಷದ ಮೊದಲ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸಲಿಲ್ಲ. ಈಗ ವರ್ಷದ ಮೊದಲ ಚಂದ್ರ ಗ್ರಹಣ ಬುದ್ಧ ಪೂರ್ಣಿಮೆ ದಿನ ಜರುಗಲಿದೆ. ಈ ಗ್ರಹಣವು ಪೆನಂಬ್ರಲ್ ಚಂದ್ರ ಗ್ರಹಣವಾಗಿದೆ. ಇದರಲ್ಲಿ ಚಂದ್ರನ ಮೇಲ್ಮೈ ಧೂಳಿನ ಬಿರುಗಾಳಿಯಂತೆ ಕಾಣಿಸಲಿದೆ.
ಇದನ್ನೂ ಓದಿ:ನ್ಯೂಸ್ ನೋಡಲು ಅತಿ ಜನಪ್ರಿಯ ಪ್ಲಾಟ್ಫಾರ್ಮ್ ಯೂಟ್ಯೂಬ್: ಅಧ್ಯಯನ
ಎಲ್ಲೆಲ್ಲಿ ಗೋಚವಾಗುತ್ತೆ ಈ ಚಂದ್ರ ಗ್ರಹಣ?: ಖಗೋಳಶಾಸ್ತ್ರಜ್ಞರ ಪ್ರಕಾರ, ವರ್ಷದ ಮೊದಲ ಚಂದ್ರ ಗ್ರಹಣವು ಯುರೋಪ್, ಏಷ್ಯಾದ ಹೆಚ್ಚಿನ ಭಾಗಗಳು, ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಕ್ಟಿಕಾ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಈ ಚಂದ್ರ ಗ್ರಹಣದ ನೋಟಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ಖಗೋಳಶಾಸ್ತ್ರ ತಜ್ಞರು ಮತ್ತು ಹಿಂದೂ ಪಂಚಾಂಗ ಲೆಕ್ಕಾಚಾರಗಳ ಆಧಾರದ ಮೇಲೆ ಈ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಇದನ್ನೂ ಓದಿ:5ಜಿ ಸ್ಮಾರ್ಟ್ಫೋನ್ ಮಾರಾಟ ಶೇ 50ರಷ್ಟು ಏರಿಕೆ: ಮುಂಚೂಣಿಯಲ್ಲಿ ಸ್ಯಾಮ್ಸಂಗ್
ಚಂದ್ರ ಗ್ರಹಣ ಕಾಲಾವಧಿ:ಭಾರತೀಯ ಕಾಲಮಾನದ ಪ್ರಕಾರ, ವರ್ಷದ ಮೊದಲ ಚಂದ್ರ ಗ್ರಹಣವು ಮೇ 5ರಂದು ರಾತ್ರಿ 8:44ಕ್ಕೆ ಪ್ರಾರಂಭವಾಗಲಿದ್ದು, ಇದು ಮಧ್ಯರಾತ್ರಿಯವರೆಗೆ ಅಂದರೆ ಮಧ್ಯಾಹ್ನ 1.01 ರವರೆಗೆ ಮುಂದುವರಿಯುತ್ತದೆ. ಗ್ರಹಣದ ಗರಿಷ್ಠ ಅವಧಿ ರಾತ್ರಿ 10:52ಕ್ಕೆ ಇರುತ್ತದೆ. ಇದು ಪೆನಂಬ್ರಲ್ ಚಂದ್ರ ಗ್ರಹಣವಾಗಲಿದೆ. ಭೂಮಿಯ ನೆರಳು ನೇರವಾಗಿ ಚಂದ್ರನ ಮೇಲೆ ಬೀಳದಿದ್ದಾಗ, ಅದನ್ನ ಪೆನಂಬ್ರಲ್ ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ:ಮನುಕುಲದ ಅವನತಿಗೆ ಕಾರಣವಾಗಲಿದೆ ಎಐ ತಂತ್ರಜ್ಞಾನ: ಅಪಾಯದ ಎಚ್ಚರಿಕೆ ನೀಡಿದ ವಿಜ್ಞಾನಿಗಳು
ಧಾರ್ಮಿಕ ದೃಷ್ಟಿಕೋನ ಪ್ರಕಾರ:ಧಾರ್ಮಿಕ ದೃಷ್ಟಿಕೋನದಿಂದ, ಪೆನಂಬ್ರಲ್ ಚಂದ್ರ ಗ್ರಹಣ ಸಂಭವಿಸಿದಾಗಲೆಲ್ಲಾ ಅದನ್ನು ಗ್ರಹಣದ ವರ್ಗದಲ್ಲಿ ಇರಿಸಲಾಗುವುದಿಲ್ಲ, ಆದ್ದರಿಂದ ಈ ಚಂದ್ರ ಗ್ರಹಣದ ಸೂತಕ ಅವಧಿಯು ಮಾನ್ಯವಾಗುವುದಿಲ್ಲ. ಸೂರ್ಯಗ್ರಹಣ ಸಂಭವಿಸುವಾಗ ಗ್ರಹಣ ಪ್ರಾರಂಭವಾಗುವ 12 ಗಂಟೆಗಳ ಮೊದಲು ಸೂತಕ ಅವಧಿ ಪ್ರಾರಂಭವಾಗುತ್ತದೆ. ಚಂದ್ರ ಗ್ರಹಣಕ್ಕೆ 9 ಗಂಟೆಗಳ ಮೊದಲು ಸೂತಕ ಪ್ರಾರಂಭವಾಗುತ್ತದೆ. ಸೂತಕ ಅವಧಿಯಲ್ಲಿ ಯಾವುದೇ ಶುಭ ಕೆಲಸ ಮತ್ತು ಪೂಜೆಯನ್ನ ಮಾಡಲಾಗುವುದಿಲ್ಲ. ಸೂತಕ ಮುಗಿದ ನಂತರವೇ, ಎಲ್ಲಾ ರೀತಿಯ ಧಾರ್ಮಿಕ ಚಟುವಟಿಕೆಗಳು ಮತ್ತೆ ಪ್ರಾರಂಭವಾಗುತ್ತವೆ. ಆದರೆ ಈ ಬಾರಿಯ ಚಂದ್ರಗ್ರಹಣಕ್ಕೆ ಇದ್ಯಾವುದೂ ಅಡೆತಡೆ ಇಲ್ಲವಾಗಿದೆ.
ಇದನ್ನೂ ಓದಿ:ಜಿಮೇಲ್ಗೂ ಬಂದಿದೆ ಬ್ಲೂ ಟಿಕ್ ಮಾರ್ಕ್: ಇದು ಸದ್ಯಕ್ಕೆ ಉಚಿತ!
ಇದನ್ನೂ ಓದಿ:ತಂತ್ರಜ್ಞಾನ ದಿಗ್ಗಜರೊಂದಿಗೆ ಕಮಲಾ ಹ್ಯಾರಿಸ್ ಮಾತುಕತೆ: ಓಪನ್ ಎಐ ಅಪಾಯಗಳ ಬಗ್ಗೆ ಚರ್ಚೆ