ಕರ್ನಾಟಕ

karnataka

ETV Bharat / state

ಬೆದರಿಕೆ ಪತ್ರ ಪ್ರಕರಣದ ಹಿಂದೆ ಕೌಟುಂಬಿಕ ದ್ವೇಷದ ಶಂಕೆ: ನಾಲ್ವರು ಆರೋಪಿಗಳು ವಶಕ್ಕೆ - bangalore latest news

ಅನಾಮಿಕ ಪತ್ರದಲ್ಲಿ ಡಿ ಜೆ ಹಳ್ಳಿ ಪ್ರಕರಣ ಹಾಗೂ ಸ್ಯಾಂಡಲ್​​ವುಡ್​ಗೆ ಡ್ರಗ್ಸ್​ ನಂಟು ಆರೋಪ​ ಪ್ರಕರಣ ಉಲ್ಲೇಖ‌ ಮಾಡಿದ್ದಾರೆ. ಪತ್ರ ಬರೆದಿರುವವರು ತಮ್ಮ ಕೌಟುಂಬಿಕ ದ್ವೇಷದ ಕಾರಣ ಈ ರೀತಿ ಮಾಡಿದ್ದಾರೆ ಎಂಬ ಗುಮಾನಿ ಇದೆ.

threat letter case; Four suspects detained
ಬೆದರಿಕೆ ಪತ್ರ ಪ್ರಕರಣದ ಹಿಂದೆ ದ್ವೇಷದ ಶಂಕೆ....ಶಂಕಿತ ನಾಲ್ವರು ವಶಕ್ಕೆ

By

Published : Oct 20, 2020, 12:12 PM IST

ಬೆಂಗಳೂರು:ಸಿ ಟಿ ಸಿವಿಲ್ ಕೋರ್ಟ್​​​ ಆವರಣಕ್ಕೆ ಬೆದರಿಕೆ ಪತ್ರ ಬಂದಿರುವ ಕುರಿತು ತನಿಖೆ ಚುರುಕುಗೊಂಡಿದ್ದು, ಶಂಕಿತ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆದರಿಕೆ ಪತ್ರದ ಜೊತೆಗೆ ಎರಡು ಮೊಬೈಲ್ ನಂಬರ್, ಕೋಡಿಹಳ್ಳಿ ಪಂಚಾಯತ್ ವ್ಯಾಪ್ತಿಯ ಹರಿವೇಸಂದ್ರ ಗ್ರಾಮದ ಶಿವಪ್ರಕಾಶ್ ಅನ್ನೋ ವ್ಯಕ್ತಿಯ ವೋಟರ್ ಐಡಿ ಪತ್ತೆಯಾಗಿದೆ. ದ್ವೇಶದ ಹಿನ್ನೆಲೆಯಲ್ಲಿ, ಸಿಟಿ ಸಿವಿಲ್ ಕೋರ್ಟ್ ಜಡ್ಜ್, ಕಮಿಷನರ್ ಕಮಲ್ ಪಂತ್​, ಜಂಟಿ ಪೊಲೀಸ್ ಆಯುಕ್ತ, ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್​​ಗೆ ಪತ್ರ ಬರೆದಿರುವ ಶಂಕೆ ವ್ಯಕ್ತವಾಗಿದೆ. ನ್ಯಾಯಾಧೀಶರಿಗೆ ಬಂದಿರುವ ಪತ್ರದಲ್ಲಿ ಡಿಟೋನೇಟರ್ ಜೊತೆಗೆ ವೈಯರ್ ಕಳುಹಿಸಿದ್ದು, ತನಿಖೆ ಚುರುಕುಗೊಂಡಿದೆ. ‌

ಈಗಾಗಲೇ ಅಧಿಕಾರಿಗಳು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಅನಾಮಿಕ ಪತ್ರದಲ್ಲಿ ಡಿ ಜೆ ಹಳ್ಳಿ ಪ್ರಕರಣ ಹಾಗೂ ಸ್ಯಾಂಡಲ್​​ವುಡ್​ಗೆ ಡ್ರಗ್ಸ್ ನಂಟು ಆರೋಪ​​ ಪ್ರಕರಣವನ್ನು ಉಲ್ಲೇಖಿಸಲಾಗಿದೆ.

ವೈಯಕ್ತಿಕ ದ್ವೇಷದ ಹಿನ್ನೆಲೆ ಒಂದು ಕುಟುಂಬದವರು ಇನ್ನೊಂದು ಕುಟುಂಬದವರನ್ನು ಸಿಲುಕಿಸಲು ಈ ರೀತಿಯಾಗಿ ಬೆದರಿಕೆ ಪತ್ರ ಬರೆದಿರುವ ಗುಮಾನಿ ಇದೆ. ಸದ್ಯ ಶಂಕಿತ ನಾಲ್ವರನ್ನ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತುಮಕೂರು ಮೂಲದಿಂದ ಪತ್ರ ಬಂದಿರುವ ಕಾರಣ ಒಂದು ತಂಡ ಅಲ್ಲಿಯೂ ಶೋಧಕಾರ್ಯ ನಡೆಸುತ್ತಿದೆ.

ABOUT THE AUTHOR

...view details