ಕರ್ನಾಟಕ

karnataka

ETV Bharat / state

ನ್ಯಾಯಾಂಗ ವ್ಯವಸ್ಥೆಗೆ ಈ ಬಜೆಟ್​​ ತೃಪ್ತಿದಾಯಕವಾಗಿಲ್ಲ: ವಕೀಲ ಸುನೀಲ್ ದತ್​ - ಬಜೆಟ್

ಈ ಬಜೆಟ್​ನಲ್ಲಿ ತಂತ್ರಜ್ಞಾನಕ್ಕೆ ಜಾಸ್ತಿ ಆದ್ಯತೆ ನೀಡಿ ಇ ಕೋರ್ಟ್ ಸ್ಥಾಪಿಸಬಹುದಿತ್ತು. ಇದರಿಂದ ಕಕ್ಷಿದಾರರಿಗೆ ಖರ್ಚು ಕಡಿಮೆಯಾಗುತ್ತಿತ್ತು. ಇ ಕೋರ್ಟ್ ಸ್ಥಾಪಿಸದೇ ಇದ್ದದ್ದು ನಮಗೆ ಬೇಸರ ತಂದಿದೆ -ವಕೀಲ ಸುನೀಲ್ ದತ್

ಹೈಕೋರ್ಟ್ ವಕೀಲ ಸುನೀಲ್

By

Published : Jul 5, 2019, 8:10 PM IST

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಚೊಚ್ಚಲ ಬಜೆಟ್ ಮಂಡನೆ ಕೆಲವರಿಗೆ‌ ಸಮಾಧಾನವಾಗಿದ್ರೆ ಮತ್ತೆ ಕೆಲವರಿಗೆ ಅಷ್ಟೊಂದು ತೃಪ್ತಿದಾಯಕವಾಗಿಲ್ಲ.

ಹೌದು, ಬಜೆಟ್​​ಲ್ಲಿ ನ್ಯಾಯಾಂಗಕ್ಕೆ ಅಷ್ಟೊಂದು ಗಮನ ಹರಿಸಿಲ್ಲ ಎಂಬ ಕೂಗು ಕೇಳಿ ಬಂದಿದೆ. ಇನ್ನು ಹೈಕೋರ್ಟ್ ವಕೀಲ ಸುನೀಲ್ ದತ್ ಈ ಕುರಿತು ಮಾತನಾಡಿ, ಹೈಕೋರ್ಟ್ ಹಾಗೂ ಕೆಳ ಹಂತದ ನ್ಯಾಯಾಲಯದಲ್ಲಿ ಬಹಳಷ್ಟು ಕೇಸ್​ಗಳು ಇತ್ಯರ್ಥವಾಗದೆ ಉಳಿದಿವೆ. ಇದನ್ನು ಆದಷ್ಟು ಬೇಗ ಕ್ಲೀಯರ್ ಮಾಡಲು ನ್ಯಾಯಾಧೀಶರ ಅಗತ್ಯತೆ ಇದ್ದು, ಈ ಬಗ್ಗೆ ಗಮನ ಹರಿಸಿಲ್ಲ ಎಂದರು.

ಹೈಕೋರ್ಟ್ ವಕೀಲ ಸುನೀಲ್ ದತ್

ಜನ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲದೇ ರೋಸಿ ಹೋಗಿದ್ದಾರೆ ಎಂದ ಅವರು, ಈ ಬಜೆಟ್​ನಲ್ಲಿ ತಂತ್ರಜ್ಞಾನಕ್ಕೆ ಜಾಸ್ತಿ ಆದ್ಯತೆ ನೀಡಿ ಇ ಕೋರ್ಟ್ ಸ್ಥಾಪಿಸಬಹುದಿತ್ತು. ಇದರಿಂದ ಕಕ್ಷಿದಾರರಿಗೆ ಖರ್ಚು ಕಡಿಮೆಯಾಗುತ್ತಿತ್ತು. ಇ ಕೋರ್ಟ್ ಸ್ಥಾಪಿಸದೇ ಇದ್ದದ್ದು ನಮಗೆ ಬೇಸರ ತಂದಿದೆ ಎಂದು ವಿವರಿಸಿದರು.

ABOUT THE AUTHOR

...view details