ಕರ್ನಾಟಕ

karnataka

ಬೆಂಗಳೂರು ವೀಕೆಂಡ್ ಕರ್ಫ್ಯೂನಲ್ಲಿ ಯಾವುದೇ ಬದಲಾವಣೆ ಇಲ್ಲ

By

Published : Jun 18, 2021, 3:03 PM IST

ಜೂನ್ 21 ಬೆಂಗಳೂರಿನಲ್ಲಿ ಸೀಮಿತವಾಗಿ ಸಾರಿಗೆ ಸಂಚಾರ ಕೂಡ ಓಪನ್ ಆಗಲಿದೆ. ಉಳಿದಂತೆ‌ ಕ್ರಮೇಣವಾಗಿ ಸ್ಥಿತಿ ಗತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಗೌರವ್ ಗುಪ್ತಾ
ಗೌರವ್ ಗುಪ್ತಾ

ಬೆಂಗಳೂರು: ವೀಕೆಂಡ್ ಕರ್ಫ್ಯೂ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸ್ಪಷ್ಟನೆ ನೀಡಿದ್ದು, ಇಂದು ಸಂಜೆಯಿಂದ ಸೋಮವಾರ ಮುಂಜಾನವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಾಗುತ್ತಿದೆ. ಹಿಂದೆ ಯಾವ ರೀತಿಯಾಗಿ ವೀಕೆಂಡ್ ಕರ್ಫ್ಯೂ ಇತ್ತೋ ಹಾಗೆಯೇ ಇದೂ ಕೂಡ ಇರಲಿದೆ ಎಂದಿದ್ದಾರೆ.

ಗೌರವ್ ಗುಪ್ತಾ

ವೀಕೆಂಡ್ ಕರ್ಫ್ಯೂ ಮಾಹಿತಿ ನೀಡಿರುವ ಅವರು, ಅನಗತ್ಯವಾಗಿ ಜನರು ಯಾರೂ ಓಡಾಡಬಾರದು. ಪೊಲೀಸ್ ಕಮಿಷನರ್ ಜೊತೆ ಈ ಬಗ್ಗೆ ಸಭೆ ನಡೆಸಲಾಗಿದೆ. ಅವರು ಫೀಲ್ಡಿಗೆ ಇಳಿದು ಕೆಲಸ ಮಾಡಲಿದ್ದಾರೆ. ಮೂರನೇ ಅಲೆ ಯಾವಾಗ ಬರುತ್ತೆ ಅಂತ ಅಂದಾಜಿಸಲಾಗಿದೆ. ಆದರೆ ನಾವು ಬೇಕಾಬಿಟ್ಟಿ ಓಡಾಡಿದರೆ ನಿರೀಕ್ಷೆಗಿಂತ ಮುಂಚಿತವಾಗಿಯೇ ಮೂರನೇ ಅಲೆ ಬರಬಹುದು ಎಂದಿದ್ದಾರೆ.

ಜೂನ್ 21ರಿಂದ ಅನ್​ಲಾಕ್ 2.O ವಿಚಾರ ಬಗ್ಗೆ ಮಾತನಾಡಿ, ಕೈಗಾರಿಕೆಗಳಿಗೆ ಅನುಮತಿ ನೀಡಲಿದ್ದೇವೆ. ಜೊತೆಗೆ ಕೆಲವೊಂದು ವಾಣಿಜ್ಯೋದ್ಯಮಗಳಿಗೂ ಅನುಮತಿ ಸಿಗಲಿದೆ ಎಂದಿದ್ದಾರೆ.

ಓದಿ:ರಾಜ್ಯದಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ: ಸಿಎಂ ಯಡಿಯೂರಪ್ಪ

ABOUT THE AUTHOR

...view details