ಬೆಂಗಳೂರು: ವಿಶ್ವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಬ್ಲೂಕಾರ್ಟ್ ಸ್ಟಾರ್ಟ್ ಅಪ್ ಕಂಪನಿಯು ಮರ ರಹಿತ ಕಾಗದ ವಸ್ತುಗಳ ಪ್ರದರ್ಶನ ಮಾಡಿದೆ. ಟ್ರೀ ಫ್ರೀ ಪೇಪರ್ ನಿಂದ ತಯಾರಾದ ವಸ್ತುಗಳು ಎಲ್ಲರ ಗಮನ ಸೆಳೆದಿದೆ.
ಟ್ರೀ ಕಾಗದದ ಉತ್ಪನ್ನಗಳನ್ನು ಟ್ರೀ ಫ್ರೀ ಕಾಗದದಿಂದ ಉತ್ಪಾದಿಸಲಾಗಿದೆ. ಒಂದು ರೀತಿಯಲ್ಲಿ ಪ್ರಾಚೀನ ಕಾಲದ ಕಾಗದಗಳನ್ನು ನೆನಪಿಸಿದಂತಿದೆ. ಟೇಬಲ್ ಕ್ಯಾಲೆಂಡರ್, ಪುಸ್ತಕ, ನೋಟ್ ಬುಕ್, ಫೈಲ್, ವಿಸಿಟಿಂಗ್ ಕಾರ್ಡ್, ಗಿಫ್ಟ್ ಕವರ್, ಬ್ರೋಷರ್, ಗ್ರೀಟಿಂಗ್ ಕಾರ್ಡ್, ಕ್ಯಾರಿ ಬ್ಯಾಗ್, ಡ್ರಾಯಿಂಗ್ ಪೇಪರ್, ಕ್ಯಾನ್ ವಾಸ್, ಪ್ಯಾಕಿಂಗ್ ಬ್ಯಾಗ್, ಆಹ್ವಾನ ಪತ್ರಿಕೆ ಹೀಗೆ ಹತ್ತು ಹಲವು ವಸ್ತುಗಳಿದ್ದವು.
ಕೇವಲ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ತಯಾರಿಸಲಾಗಿದೆ. ವ್ಯರ್ಥವಾಗಿರುವ ಬಟ್ಟೆಯ ತುಣುಕುಗಳು, ತೆಂಗಿನ ನಾರು, ಆನೆ ಲದ್ದಿ, ಲೆನಿನ್ ಬಟ್ಟೆ, ಬಾಳೆ ತ್ಯಾಜ್ಯ, ಕಾಫಿ ಬೀಜದ ತ್ಯಾಜ್ಯ, ಲೆಮನ್ ಗ್ರಾಸ್, ಕಬ್ಬಿನ ತ್ಯಾಜ್ಯ, ಬಾರ್ಲಿ ತ್ಯಾಜ್ಯ ಬಳಸಲಾಗಿದೆ. ಇಂತಹ ತ್ಯಾಜ್ಯಗಳನ್ನು ಬಳಸಿಕೊಂಡು ಕೆಮಿಕಲ್ ಫ್ರೀ ಪೇಪರ್ ತಯಾರಿಸಲಾಗಿದೆ.
ಸೇವ್ ವಾಟರ್, ಟ್ರೀ, ಅರ್ತ್ ಎನ್ನುವ ಸಂದೇಶವನ್ನಿಟ್ಟುಕೊಂಡು ಕಂಪನಿಯು ಕೆಲಸ ಮಾಡುತ್ತಿದೆ. ಮರಗಳಿಂದ ಪೇಪರ್ ತಯಾರಿಸುವ ಪರಂಪರೆಗೆ ಬ್ರೇಕ್ ಹಾಕಿದೆ. ಸಿಲಿಕಾನ್ ಸಿಟಿಯ ಪೀಣ್ಯದಲ್ಲಿರುವ ಈ ಬ್ಲೂಕಾರ್ಟ್ ಕಂಪನಿಯು ಶೇ.100 ರಷ್ಟು ಪರಿಸರ ಸ್ನೇಹಿ, ಶೂನ್ಯ ತ್ಯಾಜ್ಯ, ಪುನರ್ ಬಳಕೆಯ ಕಾಗದ ತಯಾರಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ:ಬಂಡವಾಳ ಹೂಡಿಕೆ ಸಮಾವೇಶದಲ್ಲಿ ವಸ್ತು ಪ್ರದರ್ಶನ ವೀಕ್ಷಿಸಿದ ಸಿಎಂ ಬೊಮ್ಮಾಯಿ