ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದಿಂದ ನಿಜವಾದ ನ್ಯಾಯ ಸಿಕ್ಕಿದೆ. ಮುಂದೆ ಸುಪ್ರೀಂಕೋರ್ಟ್ ತೀರ್ಪು ಏನಿರುತ್ತೋ ಗೊತ್ತಿಲ್ಲ ಸಧ್ಯಕ್ಕೆ ಅನರ್ಹರಿಗೆ ನ್ಯಾಯ ಸಿಕ್ಕಿದೆ. ಚುನಾವಣೆಗೆ ತಡೆಯಾಜ್ಞೆ ಹಿನ್ನೆಲೆಯಲ್ಲಿ ಚುನಾವಣಾ ಸಿದ್ಧತೆ ಸಭೆ ನಡೆಸಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಆದೇಶದಿಂದ ನಿಜವಾದ ನ್ಯಾಯ ಸಿಕ್ಕಿದೆ, ಚುನಾವಣಾ ಸಿದ್ದತಾ ಸಭೆ ನಡೆಸಲ್ಲ: ಸಚಿವ ಶೆಟ್ಟರ್
ಸುಪ್ರೀಂಕೋರ್ಟ್ ಆದೇಶದಿಂದ ನಿಜವಾದ ನ್ಯಾಯ ಸಿಕ್ಕಿದೆ ಮುಂದೆ ಸುಪ್ರೀಂಕೋರ್ಟ್ ತೀರ್ಪು ಏನಿರುತ್ತೋ ಗೊತ್ತಿಲ್ಲ. ಸಧ್ಯಕ್ಕೆ ನ್ಯಾಯ ಸಿಕ್ಕಿದೆ. ಚುನಾವಣೆಗೆ ತಡೆ ಹಿನ್ನೆಲೆಯಲ್ಲಿ ಚುನಾವಣಾ ಸಿದ್ಧತೆ ಸಭೆ ನಡೆಸಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆ ಕೊಟ್ಟಿದ್ದು ಸ್ವಾಗತಾರ್ಹ. ನ್ಯಾಯಯುತವಾದ ಆದೇಶ ಸುಪ್ರೀಂಕೋರ್ಟ್ನಿಂದ ಬಂದಿದೆ. ಸುಪ್ರೀಂಕೋರ್ಟ್ ಅನರ್ಹ ಶಾಸಕರ ಪ್ರಕರಣದ ವಿಚಾರಣೆಯನ್ನು ಇನ್ನಷ್ಟು ವಿಸ್ತಾರವಾಗಿ ನಡೆಸಬಹುದು. ಕೋರ್ಟಿನಲ್ಲಿ ಅರ್ಜಿ ವಿಚಾರಣೆ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಚುನಾವಣಾ ಆಯೋಗ ಚುನಾವಣೆ ಘೋಷಿಸಬಾರದಿತ್ತು. ಯಾಕಂದರೆ ಚುನಾವಣೆ ನಂತರ ಹೊಸ ಶಾಸಕ ಗೆದ್ದ ಸಂದರ್ಭದಲ್ಲಿ ಅನರ್ಹತೆ ರದ್ದಾದರೆ ಅನರ್ಹಗೊಂಡ ಶಾಸಕರು ಏನ್ ಮಾಡೋದು? ಅವರು ಮರಳಿ ಶಾಸಕರಾಗಬೇಕಾಗುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ಇದನ್ನು ನೋಡಬೇಕಾಗುತ್ತದೆ ಹಾಗಾಗಿ ಇವತ್ತು ಸುಪ್ರೀಂಕೋರ್ಟ್ನ ಆದೇಶ ಸ್ವಾಗತಾರ್ಹ. ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರಿಗೆ ಸೂಕ್ತ ನ್ಯಾಯ ಸಿಗುತ್ತೆ ಅನ್ನೋ ವಿಶ್ವಾಸ ನನಗಿದೆ ಎಂದರು.