ಕರ್ನಾಟಕ

karnataka

ETV Bharat / state

ಕ್ರಿಕೆಟ್​ ವಿಚಾರವಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ... ಯುವಕನನ್ನು ಇರಿದ ಸ್ನೇಹಿತ ಎಸ್ಕೇಪ್​ - Quarrel start between friends for cricket matter

ಕ್ರಿಕೆಟ್​ ವಿಚಾರವಾಗಿ ಶುರುವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ಸರಸ್ವತಿ ಬಡಾವಣೆಯಲ್ಲಿ ನಡೆದಿದೆ.

ಜಗಳ ಕೊಲೆಯಲ್ಲಿ ಅಂತ್ಯ

By

Published : Nov 21, 2019, 7:20 PM IST

ಬೆಂಗಳೂರು: ಕ್ರಿಕೆಟ್​ ವಿಚಾರವಾಗಿ ಶುರುವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ಸರಸ್ವತಿ ಬಡಾವಣೆಯಲ್ಲಿ ನಡೆದಿದೆ.

ಉಮಾಮಹೇಶ್​ ಹತ ಯುವಕ. ಆಂಧ್ರ ಮೂಲದವನಾದ ಈತ ಬೆಂಗಳೂರಿನ ನಂದಿನಿ ಲೇಔಟ್​​ನ ಸರಸ್ವತಿ ಬಡಾವಣೆಯಲ್ಲಿ ವಾಸವಿದ್ದ.

ಖಾಸಗಿ ಕಾಲೇಜಿನಲ್ಲಿ ಬಿಸಿಎ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದ ಈತ ನಿನ್ನೆ ರಾತ್ರಿ ಸ್ನೇಹಿತರಿಂದ ಚಾಕುವಿನ ಇರಿತಕ್ಕೊಳಗಾಗಿ ಇಂದು ಮುಂಜಾನೆ ಸಾವಿಗೀಡಾಗಿದ್ದಾನೆ.

ಕ್ರಿಕೆಟ್​ ವಿಚಾರವಾಗಿ ಜಗಳ

ನಿನ್ನೆ ಸಂಜೆ ಸರಸ್ವತಿ ಬಡಾವಣೆಯಲ್ಲಿರುವ ಬೇಕರಿ ಬಳಿ ಸ್ನೇಹಿತರ ಜೊತೆ ಉಮಾಮಹೇಶ್ ಬಂದಿದ್ದ. ಈ ವೇಳೆ ಕ್ರಿಕೆಟ್ ವಿಚಾರವಾಗಿ ಸ್ನೇಹಿತನ ಜೊತೆ ಜಗಳವಾಡಿದ್ದಾನಂತೆ. ಇದೇ ವೇಳೆ ಮತ್ತೊಬ್ಬ ಸ್ನೇಹಿತ ಉಮಾಮಹೇಶ್ ಹೊಟ್ಟೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ನಂತರ ಉಳಿದ ಸ್ನೇಹಿತರೆಲ್ಲ ಹೆದರಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರೇ ಆತನನ್ನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಇನ್ನೂ ಉಮಾಮಹೇಶ್ ಕಾಲೇಜು ಮೆಟ್ಟಿಲೇರಿದಾಗಿನಿಂದಲೂ ಓದುತ್ತಿರಲಿಲ್ಲವಂತೆ. ಸ್ನೇಹಿತರು, ಮೋಜು, ಮಸ್ತಿಯೆಂದು ಓಡಾಡ್ತಾ ಇದ್ನಂತೆ. ಅದೇ ರೀತಿ ಎರಡು ದಿನಗಳ ಹಿಂದೆ ಇದೇ ಉಮಾಮಹೇಶ್ ಕ್ರಿಕೆಟ್ ವಿಚಾರವಾಗಿ ಸ್ನೇಹಿತನೊಬ್ಬನ ಮೇಲೆ ಹಲ್ಲೆ ಮಾಡಿದ್ನಂತೆ. ಅದೇ ಸಿಟ್ಟಿನಿಂದ ಸ್ನೇಹಿತರು ಕೊಲೆ ಮಾಡಿರಬಹುದು ಎಂದು ಹೇಳಲಾಗ್ತಿದೆ. ಇನ್ನು ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲೂ ಹಲವರ ನಡುವೆ ಹಣಕಾಸು ವ್ಯವಹಾರ ಮಾಡ್ತಿದ್ದ ಎಂದು ಹೇಳಲಾಗ್ತಿದೆ. ಸದ್ಯ ಪ್ರಕರಣ ಕೈಗೆತ್ತಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ಆರೋಪಿಗಳ‌ ಪತ್ತೆಗಾಗಿ ಬಲೆ‌ ಬೀಸಿದ್ದಾರೆ.

ABOUT THE AUTHOR

...view details