ಬೆಂಗಳೂರು : ಐಎಂಎ ಜ್ಯುವೆಲ್ಲರಿಯಿಂದ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಮನ್ಸೂರ್ ತನ್ನ ಬಳಿ ಎಷ್ಟೆಷ್ಟು ಚಿನ್ನಾಭರಣ ಹಾಗೂ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ.
ಅಷ್ಟಕ್ಕೂ ಆ ಪ್ರತ್ರದಲ್ಲೇನಿದೆ ?

ಪತ್ರದಲ್ಲಿ ತನ್ನ ಆಸ್ತಿಯ ವಿವರವನ್ನು ಸ್ವತಃ ಮನ್ಸೂರ್ ನೀಡಿದ್ದು, ₹488 ಕೋಟಿ ಮೌಲ್ಯದ ಚರಾಸ್ತಿ, 1888 ಕೆಜಿ ಚಿನ್ನಾಭರಣ,18.64 ಕೆಜಿ ಪ್ಲಾಟಿನಂ, 463 ಕೆಜಿಯ ಬೆಳ್ಳಿ ವಸ್ತುಗಳು, 30 ಸಾವಿರ ಕ್ಯಾರೆಟ್ ವಜ್ರ ಹಾಗೆ ಐಎಂಎ ಗೋಲ್ಡ್‌ನಿಂದ ಅಡಮಾನ ಪಡೆದ 350 ಕೆಜಿ ಚಿನ್ನ, ಕೋಟ್ಯಂತರ ರೂಪಾಯಿ ಬೆಲೆಬಾಳುವ ಅಮೂಲ್ಯ ರತ್ನಗಳು10-66 ಕೆಜಿ ಇದೆ ಎಂದು ಉಲ್ಲೇಖ ಮಾಡಲಾಗಿದೆ.
ಸದ್ಯ ಮನ್ಸೂರ್ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. ತನ್ನ ಆಸ್ತಿಯ ಬಗ್ಗೆ ಸ್ವತಃ ಮನ್ಸೂರ್ ಪತ್ರದ ಮೂಲಕ ಘೋಷಣೆ ಮಾಡಿದ್ದಾನೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.