ಕರ್ನಾಟಕ

karnataka

ETV Bharat / state

ಮೇ.31 ನಂತರ ಹೋಟೆಲ್ ತೆರೆಯಲು ಅವಕಾಶ:  ಎಸ್.ಆರ್.ವಿಶ್ವನಾಥ್ ವಿಶ್ವಾಸ

ಹೋಟೆಲ್​​ಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವಂತೆ ಅವಕಾಶ ಕೋರಿ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ. ಹಾಗಾಗಿ ಹೋಟೆಲ್​ಗಳನ್ನು ತೆರೆಯಲು ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್ ತಿಳಿಸಿದ್ದಾರೆ.

The hotel is likely to open after May 31: SR Vishwanath
ಮೇ.31 ನಂತರ ಹೋಟೆಲ್ ತೆರೆಯಲು ಅವಕಾಶ ನೀಡುವ ಸಾಧ್ಯತೆಯಿದೆ: ಎಸ್.ಆರ್.ವಿಶ್ವನಾಥ್

By

Published : May 26, 2020, 5:50 PM IST

ಬೆಂಗಳೂರು:ಲಾಕ್​ಡೌನ್​ ಮುಗಿದ ನಂತರ ಪೂರ್ಣ ಪ್ರಮಾಣದಲ್ಲಿ ಹೋಟೆಲ್​ಗಳನ್ನು ತೆರೆಯಲು ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಟೆಲ್​​ಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವಂತೆ ಅವಕಾಶ ಕೋರಿ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ. ಈ ತಿಂಗಳ 31ರ ಬಳಿಕ ಹೋಟೆಲ್​​ಗಳನ್ನು ತೆರೆಯಲು ಅವಕಾಶ ಕೊಡುವ ಸಾಧ್ಯತೆ ಇದೆ ಎಂದರು.

ಎಸ್.ಆರ್.ವಿಶ್ವನಾಥ್

ಕೊರೊನಾದಿಂದಾಗಿ ಹೋಟೆಲ್ ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಸಭೆ ಮಾಡಿ ನಂತರ ಅಂತಿಮ ತೀರ್ಮಾನ ಮಾಡಲಾಗುತ್ತದೆ. ಮುಖ್ಯಮಂತ್ರಿಯವರು ಹೋಟೆಲ್ ತೆರೆಯಲು ಅನುಮತಿ ಕೊಡಬಹುದು ಎಂಬ ನಂಬಿಕೆ ಇದೆ.

ಸದ್ಯ ಹೋಟೆಲ್​ನಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಈಗ ಅವಕಾಶ ಇದೆ. ರಾಜ್ಯಕ್ಕೆ ಬೇರೆ ರಾಜ್ಯಗಳಿಂದ ಬಂದವರಿಂದಲೇ, ಅದರಲ್ಲೂ ಮಹಾರಾಷ್ಟ್ರದಿಂದ ಬಂದವರಿಂದಲೇ ಅತಿಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ತಮಿಳುನಾಡು ಕೂಡಾ ಇದರಿಂದ ಹೊರತಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಇನ್ನೂ ಕಳ್ಳದಾರಿಯಲ್ಲಿ ಬರುವುದು ಬೇಡ, ನೇರವಾಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡು ಬನ್ನಿ. ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜನರಲ್ಲಿ ಎಸ್​ ಆರ್​ ವಿಶ್ವನಾಥ್​ ಮನವಿ ಮಾಡಿದರು.

ABOUT THE AUTHOR

...view details