ಬೆಂಗಳೂರು:ಕರ್ನಾಟಕಕ್ಕೆ ಹೆಚ್ಚಿನ ಹೂಡಿಕೆ ಬರಬೇಕು ಅಂದರೆ ಲೀಸ್ ಮತ್ತು ಸೇಲ್ ಡೀಡ್ ಆಗಬೇಕು. ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಹೂಡಿಕೆದಾರರಿಗೆ ರೆಡ್ ಕಾರ್ಪೆಟ್ ಹಾಸಬೇಕು ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.
ಜಿಂದಾಲ್ ಭೂಮಿ ವಿವಾದ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಎಫ್‌ಕೆಸಿಸಿಐ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಪ್ರತಿಕ್ರಯಿಸಿದ್ದು, ಜಿಂದಾಲ್ ಸಂಸ್ಥೆಗೆ ಲೀಸ್ ಕಮ್ ಸೇಲ್ ಡೀಡ್ ಮಾಡಿದ ಸರ್ಕಾರ ಈಗ ಲೀಸ್ ಅವಧಿ ಮುಗಿದ ನಂತರ ಮಾರಾಟ ಮಾಡಬೇಕು. ಮತ್ತೆ ಇದನ್ನು ಲೀಸ್ ಮಾಡಬಾರದು ಎಂದರು.
ಸರ್ಕಾರ ಜಿಂದಾಲ್ ಸಂಸ್ಥೆಗೆ ಜಾಗವನ್ನು ಮಾರಾಟ ಮಾಡಲೇಬೇಕು ಹೂಡಿಕೆದಾರರು ಕರ್ನಾಟಕಕ್ಕೆ ಬಂದು ಹೂಡಿಕೆ ಮಾಡಿ ಜಾಗವನ್ನು ಲೀಸ್ ಮತ್ತು ಸೇಲ್ ಅಗ್ರಿಮೆಂಟ್ನಂತೆ ಮಾಡಬೇಕು. ಲೀಸ್ ಅವಧಿ ಮುಗಿದ ನಂತರ ನಿಗದಿತ ಬೆಲೆಯ ಅನುಸಾರವಾಗಿ ಜಾಗವನ್ನು ಮಾರಾಟ ಮಾಡಬೇಕು. ಹೀಗೆ ಮಾಡದ ಸಂದರ್ಭದಲ್ಲಿ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಿಂದೆ ಹಾಕುತ್ತಾರೆ. ಇದರ ಪರಿಣಾಮ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ. ಇದನ್ನು ಮಾಡುವಾಗ ಕೃಷಿ ಜಮೀನನ್ನು ಯಾವುದೇ ಕೈಗಾರಿಕೆ ಉದ್ದೇಶವಾಗಿ ಬಳಸಬಾರದು ಜೊತೆಗೆ ಇಂತಾ ವಿಷಯಕ್ಕೆ ಯಾರು ರಾಜಕೀಯ ಮಾಡಬಾರದು ಎಂದು ಎಫ್‌ಕೆಸಿಸಿಐ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಜಿಂದಾಲ್ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ ಶೆಟ್ಟಿ, ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ವ್ಯವಸ್ಥೆ ಅತೀ ಶ್ರೀಘ್ರವಾಗಿ ಬರಬೇಕು, 5 ಸ್ಯಾಟಲೈಟ್ ಟೌನ್‌ಗಳ ನಿರ್ಮಾಣವಾಗಬೇಕು. ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆ ಹಾಗೂ ಎಲಿವೇಟೆಡ್ ಕಾರಿಡಾರ್ ಕೂಡ ಬರಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.