ಕರ್ನಾಟಕ

karnataka

ETV Bharat / state

ಸೌಂಡ್​ ಕಡಿಮೆ ಮಾಡು ಎಂದಿದ್ದಕ್ಕೆ ಗ್ಯಾಂಗ್​ ಕರೆಸಿ ಯುವಕನಿಗೆ ಥಳಿಸಿದ ಆಟೋ ಚಾಲಕ

ತಮಿಳು ಹಾಡೊಂದನ್ನು ಜೋರಾಗಿ ಹಾಕಿಕೊಂಡು ಹೋಗುತ್ತಿದ್ದ ಆಟೋ ಚಾಲಕನಿಗೆ ಹಾಡಿನ ಸೌಂಡ್ ಕಡಿಮೆ ಮಾಡುವಂತೆ ಹೇಳಿದಕ್ಕೆ ಕೋಪಗೊಂಡ ಚಾಲಕ ತನ್ನ ಗ್ಯಾಂಗ್​ ಕರೆಸಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

The Auto Driver who was called the gang to fight against young man
ಸೌಂಡ್​ ಕಡಿಮೆ ಮಾಡು ಎಂದಿದ್ದಕ್ಕೆ ಗ್ಯಾಂಗ್​ ಕರೆಸಿ ಥಳಿಸಿದ ಆಟೋ ಚಾಲಕ

By

Published : Aug 3, 2020, 5:05 PM IST

ಬೆಂಗಳೂರು: ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ಕೋಪಗೊಂಡ ಆಟೋ ಚಾಲಕ ಹಾಗೂ ಆತನ ಗ್ಯಾಂಗ್ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ನಿನ್ನೆ ಸಂಜೆ ಅನ್ನಪೂರ್ಣೇಶ್ವರಿ ಠಾಣಾ ವ್ಯಾಪ್ತಿಯ ನಾಗರಬಾವಿ ಬಳಿ ಘಟನೆ ನಡೆದಿದೆ. ನಾಗರಭಾವಿಯ ಭಾರತ್ ಪೆಟ್ರೋಲ್ ಬಂಕ್ ಬಳಿಯ ನಮ್ಮೂರ ತಿಂಡಿ ಬಳಿ ಸಂತೋಷ್​ ಎನ್ನುವವರು ನಡೆದುಕೊಂಡು ಹೋಗವಾಗ ಆಟೋನಲ್ಲಿ ಜೋರಾಗಿ ಸೌಂಡ್​ ಕೊಟ್ಟು ತಮಿಳು ಹಾಡು ಹಾಕಿದ್ದಾತ ಎದುರಾಗಿದ್ದಾನೆ. ಈ ವೇಳೆ ಸಂತೋಷ್ ಕುಮಾರ್ ಸೌಂಡ್ ಕಡಿಮೆ ಮಾಡುವಂತೆ ಹೇಳಿದ್ದಾರೆ.

ಸೌಂಡ್​ ಕಡಿಮೆ ಮಾಡು ಎಂದಿದ್ದಕ್ಕೆ ಗ್ಯಾಂಗ್​ ಕರೆಸಿ ಥಳಿಸಿದ ಆಟೋ ಚಾಲಕ

ಇದಕ್ಕೊಪ್ಪದ ಕಾರಣ ಚಾಲಕ ಹಾಗೂ ಸಂತೋಷ್​ ನಡುವೆ ಮಾತಿನ ಚಕಮಕಿ ನಡೆದಿದೆ.‌ ಮಾತಿಗೆ ಮಾತು ಬೆಳೆದು ಕನ್ನಡದ ಬಗ್ಗೆ ಚಾಲಕ ಅವಹೇಳನಕಾರಿ ಮಾತನಾಡಿದ್ದಾನೆ ಎಂದು ಸಂತೋಷ್ ಆರೋಪಿಸಿದ್ದಾರೆ.

ಬಳಿಕ ಗಲಾಟೆ ಹೆಚ್ಚಾಗುತ್ತಿದ್ದಂತೆ 40ಕ್ಕೂ ಹೆಚ್ಚು ಮಂದಿಯನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು‌ ಸಂತೋಷ್ ಆರೋಪಿಸಿದ್ದಾರೆ. ಘಟನೆ ನಂತರ ಅನ್ನಪೂರ್ಣೇಶ್ವರಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಘಟನೆಯ ಸಿಸಿಟಿವಿಯ ದೃಶ್ಯಾವಳಿ ಪೊಲೀಸರಿಗೆ ಲಭ್ಯವಾಗಿದ್ದು ದೃಶ್ಯದ ಆಧಾರದ ಮೇಲೆ ತನಿಖೆ ನಡಸಲು ಮುಂದಾಗಿದ್ದಾರೆ‌.

ABOUT THE AUTHOR

...view details