ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಆರ್ಭಟ ಮತ್ತೆ ಮುಂದುವರೆದಿದೆ. ಇಂದು ರಾಜ್ಯದಲ್ಲಿ,1,40,452 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, 14,473 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಪಾಸಿಟಿವಿಟಿ ರೇಟ್ 10.30% ರಷ್ಟಿದೆ.
ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಕೋವಿಡ್ ಕೇಸ್ ಪತ್ತೆ: ಶೇ.10 ದಾಟಿತು ಪಾಸಿಟಿವಿಟಿ ರೇಟ್, ಬೆಂಗಳೂರಿಗೆ ಆಘಾತ! - Karnataka COVID update
Karnataka COVID update: ಒಂದೇ ದಿನ ರಾಜ್ಯದಲ್ಲಿ 14ಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗಿವೆ.
ಕೋವಿಡ್
1,356 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಐವರು ಸೋಂಕಿತರು ಮೃತಪಟ್ಟಿದ್ದಾರೆ. ರೆಡ್ ಝೋನ್ ಆಗಿರುವ ರಾಜಧಾನಿ ಬೆಂಗಳೂರಲ್ಲಿ ಇಂದು 10,800 ಮಂದಿಗೆ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇಬ್ಬರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,424ಕ್ಕೆ ಏರಿದೆ. ಸದ್ಯ ನಗರದಲ್ಲಿ 50,000 ಸಕ್ರಿಯ ಪ್ರಕರಣಗಳಿವೆ.