ಬೆಂಗಳೂರು: ಮತ್ತೆ ಮುಸ್ಲಿಮರಿಗೆ ಮೀಸಲಾತಿ ನೀಡುತ್ತೇವೆ ಎಂದಿರುವ ಕಾಂಗ್ರೆಸ್ ಯಾವ ಒಬಿಸಿ ಮೀಸಲಾತಿಯಿಂದ ಕಿತ್ತು ವಾಪಸ್ ಕೊಡ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದರು. ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿಯನ್ನು ವಾಪಸ್ ಕೊಡುತ್ತೇವೆ ಎಂದು ಸಿದ್ದರಾಮಯ್ಯ, ಡಿಕೆಶಿ ಹೇಳುತ್ತಿದ್ದಾರೆ. ಆದರೆ ಯಾವ ಒಬಿಸಿ ಮೀಸಲಾತಿಯಿಂದ ಕಿತ್ತು ಮುಸ್ಲಿಂರಿಗೆ ಮೀಸಲಾತಿ ಕೊಡುತ್ತೀರಿ. ಯಾರಿಂದ ಕಿತ್ತು ಮುಸ್ಲಿಂರಿಗೆ 4% ಮೀಸಲಾತಿ ಕೊಡುತ್ತೀರಿ. ಇದನ್ನು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ನಿಂದ ಒಬಿಸಿ ವಿರುದ್ಧ ಪಿತೂರಿ- ಸಂಸದ ತೇಜಸ್ವಿ ಸೂರ್ಯ.. ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಆಳಕ್ಕೆ ಕೊಂಡೊಯ್ಯುವ ಐತಿಹಾಸಿಕ ಯತ್ನವನ್ನು ಬಿಜೆಪಿ ಸರ್ಕಾರ ಮಾಡಿದೆ. ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸಿದೆ. ಆ ಮೂಲಕ ಕಾಂಗ್ರೆಸ್ ರಾಜಕಾರಣದ ಬಗ್ಗೆ ಅಸಹ್ಯ ತರುತ್ತಿದೆ. ಒಬಿಸಿಗೆ ನೀಡಿದ ಮೀಸಲಾತಿ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಇದ್ದ 4% ರದ್ದು ಮಾಡಿರುವುದನ್ನು ಅವರಿಗೆ ಸಹಿಸಲು, ಜೀರ್ಣ ಮಾಡಿಕೊಳ್ಳು ಸಾಧ್ಯವಾಗುತ್ತಿಲ್ಲ. ನಾವು ಬಂದರೆ 13% ಮುಸ್ಲಿಂ ಸಮುದಾಯದ ಜನಸಂಖ್ಯೆಗೆ ಆಧಾರದಲ್ಲಿ ಮೀಸಲಾತಿ ನೀಡುತ್ತೇವೆ ಎಂದಿದ್ದಾರೆ. ಇದು ಒಬಿಸಿಗೆ ಮಾಡುವ ಅನ್ಯಾಯವಾಗಿದೆ. ನಿರಂತರವಾಗಿ ಒಬಿಸಿ ಸಮುದಾಯದ ವಿರುದ್ಧ ಕಾಂಗ್ರೆಸ್ ಪಿತೂರಿ ಮಾಡುತ್ತಿದೆ ಎದುರು ಕಿಡಿಕಾರಿದರು.
1954-2018 ರ ವರೆಗೆ ಒಬಿಸಿ ಆಯೋಗಕ್ಕೆ ಸಂವಿಧಾನದ ದರ್ಜೆ ಕೊಡುವ ಕೆಲಸ ಮಾಡಿರಲಿಲ್ಲ. ಮೋದಿ ಸರ್ಕಾರ ಬಂದ ಬಳಿಕ ಸಂವಿಧಾನದ ಸ್ಥಾನಮಾನ ನೀಡಿತ್ತು. ಕಾಂಗ್ರೆಸ್ ಗೆ ಹಿಂದೂ ಸಮುದಾಯದ ಮೇಲೆ ಏಕೆ ಇಷ್ಟು ಆಕ್ರೋಶ ಇದೆ?. ಅವರಿಗೆ ಹಿಂದುಳಿದ ಸಮುದಾಯದ ಮೇಲೆ ಏಕೆ ದ್ವೇಷ?. ಮಂಡಲ್ ಕಮಿಷನ್ ಬಗ್ಗೆನೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ದಶಕಗಳಿಂದ ಮೆಡಿಕಲ್ ಶಿಕ್ಷಣದಲ್ಲಿ 27% ಒಬಿಸಿಗೆ ಮೀಸಲಾತಿ ಸಿಗಬೇಕು ಎಂಬ ಬೇಡಿಕೆ ಇದೆ. ಆದರೆ ಕಾಂಗ್ರೆಸ್ ಮಾಡಿರಲಿಲ್ಲ. ಇದನ್ನೂ ಮೋದಿ ಸರ್ಕಾರ ಮಾಡಿದೆ. ಸಾಂವಿಧಾನಿಕವಾಗಿ ಒಬಿಸಿಗೆ ಸಿಗಬೇಕಾದ ಹಕ್ಕನ್ನು ಕಾಂಗ್ರೆಸ್ ಕಿತ್ತು, ಮುಸ್ಲಿಂ ಸಮುದಾಯಕ್ಕೆ ನೀಡುವ ಮೂಲಕ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
2012ರಲ್ಲಿ ಮತ್ತೆ 4.5% ಮುಸ್ಲಿಂಗೆ ಮೀಸಲಾತಿ ಕೊಡುತ್ತೇವೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು. ಅದನ್ನು ಒಬಿಸಿಯಿಂದಲೇ ತರುತ್ತೇವೆ ಎಂದಿದ್ದರು. ಕಾಂಗ್ರೆಸ್ ಪಾರ್ಟಿಯ ಮೆಂಟಾಲಿಟಿ ಒಬಿಸಿ ವಿರುದ್ಧವಾದ ಮೆಂಟಾಲಿಟಿಯಾಗಿದೆ. ಒಬಿಸಿ ನಾಯಕರೆಲ್ಲರೂ ಕಾಂಗ್ರೆಸ್ ನ್ನು ವಿರೋಧಿಸಿದ ನಾಯಕರಾಗಿದ್ದವರು. ಗಾಂಧಿ ಕುಟುಂಬ ಒಬಿಸಿಯನ್ನು ವಿರೋಧಿಸುತ್ತದೆ. ದೇವರಾಜ ಅರಸರನ್ನು ಕಾಂಗ್ರೆಸ್ ಅಪಮಾನಿಸಿತ್ತು. ಕಾಂಗ್ರೆಸ್ ಗೆ ಕೇಳುವ ಮುಖ್ಯ ಪ್ರಶ್ನೆ ಎಸ್ ಸಿ, ಎಸ್ಟಿ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಸಿಗಬೇಕು ಎಂಬ ಬೇಡಿಕೆ ಇತ್ತು. ಆದರೆ ಕಾಂಗ್ರೆಸ್ ಆರು ವರ್ಷ ಆಡಳಿತದಲ್ಲಿ ಇದ್ದಾಗ ಏಕೆ ಮೀಸಲಾತಿ ಹೆಚ್ಚಳ ಮಾಡಿಲ್ಲ. ನಮ್ಮ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ ಎಂದು ಅವರು ಸಮರ್ಥಿಸಿಕೊಂಡರು.