ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ವಿಷಯದಲ್ಲಿ ಇಂದು ಸುಪ್ರೀಂಕೋರ್ಟ್ ನೀಡಿದ ಸಾಂದರ್ಭಿಕ ತೀರ್ಪನ್ನು ಬಿಜೆಪಿ ಸ್ವಾಗತ ಮಾಡಲಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಸುಪ್ರೀಂ ತೀರ್ಪು ಸ್ವಾಗತಾರ್ಹ: ಸಿ.ಟಿ. ರವಿ - CT Ravi
ಅತೃಪ್ತ ಶಾಸಕರ ರಾಜೀನಾಮೆ ವಿಷಯದಲ್ಲಿ ಇಂದು ಸುಪ್ರೀಂಕೋರ್ಟ್ ನೀಡಿದ ಸಾಂದರ್ಭಿಕ ತೀರ್ಪನ್ನು ಬಿಜೆಪಿ ಸ್ವಾಗತ ಮಾಡಲಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಸುಪ್ರೀಂ ತೀರ್ಪು ಸ್ವಾಗತಾರ್ಹ: ಸಿ.ಟಿ ರವಿ
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಗಿನ ಎಲ್ಲ ವಿದ್ಯಮಾನ ನೋಡಿದಾಗ ಉದ್ದೇಶ ಪೂರ್ವಕವಾಗಿ ಶಾಸಕರ ರಾಜೀನಾಮೆ ಅಂಗೀಕಾರ ವಿಳಂಬ ಮಾಡಲಾಗುತ್ತಿದೆ ಎನ್ನುವ ಭಾವನ ಬರುತ್ತಿದೆ. ಇರುವ ಅಧಿಕಾರಕದ ಪರಿಮಿತಿಯನ್ನು ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಬಾರದು ಎಂದು ತೀರ್ಪು ನೀಡಿರುವುದು ಸ್ವಾಗತ. ಈ ಹಿಂದೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾಗ ಕೇವಲ ಮೂರು ನಿಮಿಷಕ್ಕೆ ಅಂಗೀಕಾರ ಮಾಡಿದ್ದನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಇದೇ ಸಮಯದಲ್ಲಿ ಸ್ಪೀಕರ್ಗೆ ವಿನಂತಿ ಮಾಡಿದರು.