ಬೆಂಗಳೂರು:ಬೆಂಗಳೂರು ಮಹಾನಗರ ಸಾರಿಗೆ ನಿಗಮದ ( ಬಿಎಂಟಿಸಿ) ವತಿಯಿಂದ ಇಂದು ಶಾಂತಿನಗರದ ಬಿಎಂಟಿಸಿ ಘಟಕ 2 ರಲ್ಲಿ ಸಾರಿಗೆ ಸಿಬ್ಬಂದಿಗೆ ಎರಡನೆಯ ಹಂತದಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವ ಆಂದೋಲನಕ್ಕೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಬಿಬಿಎಂಪಿ ಮೂಲಕ ಚಾಲಕರು - ನಿರ್ವಾಹಕರ ಹಾಗೂ ಸಿಬ್ಬಂದಿಗೆ ಲಸಿಕೆ ನೀಡಲಾಗ್ತಿದ್ದು, 31 ಸಾವಿರ ಬಿಎಂಟಿಸಿ ನೌಕರರಿಗೆ ಕೊರೊನಾ ವ್ಯಾಕ್ಸಿನೇಷನ್ ನೀಡಲಾಗುತ್ತಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ನಿಗಮಗಳಿಂದ ಶೇಕಡಾ 70 ನೌಕರರಿಗೆ ವ್ಯಾಕ್ಸಿನ್ ನೀಡಲಾಗಿದೆ. ಇದೀಗ 2ನೇ ಡೋಸ್ ಆರಂಭವಾಗಿದ್ದು, ಸೆಕೆಂಡ್ ಡೋಸ್ ಪಡೆದ ನಂತರವೇ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ಊರುಗಳಿಗೆ ತೆರಳಿರುವ ಸಾರಿಗೆ ನೌಕರರಿಗೆ ಆಯಾ ಜಿಲ್ಲೆಗಳಲ್ಲೇ ವ್ಯಾಕ್ಸಿನ್ ಹಂಚಿಕೆ ಮಾಡಲಾಗಿದೆ ಅಂದರು.
ಹಂತ ಹಂತವಾಗಿ ಅನ್ಲಾಕ್:ರಾಜ್ಯದಲ್ಲಿ ಅನ್ಲಾಕ್ ವಿಚಾರವಾಗಿ ಮಾತನಾಡಿದ ಅವರು, ನಾಳೆ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ. ಏಕ ಕಾಲಕ್ಕೆ ಅನ್ಲಾಕ್ ಬೇಡ ಎಂದು ಸವದಿ ಹಂತ ಹಂತವಾಗಿ ಅನ್ಲಾಕ್ ಮಾಡಿದರೆ ಸೂಕ್ತ ಎಂದು ತಿಳಿಸಿದರು.