ಬೆಂಗಳೂರು:ನಿಷೇಧಿತ ಲಷ್ಕರ್-ಇ-ತೊಯ್ಬಾ ಸಂಘಟನೆಯ ಸಂಪರ್ಕ ಬೆಳೆಸಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಲು ಸಂಚು ರೂಪಿಸಿ 2012ರಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದ ಮೂವರನ್ನು ದೋಷಿಗಳೆಂದು ಪರಿಗಣಿಸಿರುವ ವಿಶೇಷ ನ್ಯಾಯಾಲಯ, ಶಿಕ್ಷೆಯ ಪ್ರಮಾಣವನ್ನು ಫೆ.27ಕ್ಕೆ ಕಾಯ್ದಿರಿಸಿದೆ. ಮೈಸೂರು ರಸ್ತೆಯ ಟಿಪ್ಪುನಗರದ ನಿವಾಸಿ ಸೈಯ್ಯದ್ ಅಬ್ದುಲ್ ರೆಹಮಾನ್ ಅಲಿಯಾಸ್ ಅಬ್ದುಲ್ ರೆಹಮಾನ್ (25), ಪಾಕಿಸ್ತಾನ ಕರಾಚಿಯ ಉತ್ತರ ನಿಜಾಮ್‌ಬಾದ್ ನಿವಾಸಿ ಮೊಹಮದ್ ಪಹಾದ್ ಹೈ ಅಲಿಯಾಸ್ ಮೊದಮದ್ ಖೋಯಾ (30), ಚಿಂತಾಮಣಿ ಮೂಲದ ಲಕ್ಕಸಂದ್ರದ ನಿವಾಸಿ ಅಪ್ಸರ್ ಪಾಷಾ ಅಲಿಯಾಸ್ ಖಷೀರುದ್ದಿನ್ (32) ಅಪರಾಧಿಗಳು.
ಉಗ್ರ ಕೃತ್ಯಕ್ಕೆ ಸಂಚು: ಮೂವರು ಶಂಕಿತರು ದೋಷಿ; ಫೆ.27ಕ್ಕೆ ಶಿಕ್ಷೆ ಕಾಯ್ದಿರಿಸಿದ ಕೋರ್ಟ್
ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಲು ಸಂಚು ಹೂಡಿ 2012ರಲ್ಲಿ ಬಂಧನಕ್ಕೊಳಗಾದ ಮೂವರು ಶಂಕಿತರ ಶಿಕ್ಷೆ ಪ್ರಮಾಣವನ್ನು ಹೈಕೋರ್ಟ್ ಕಾಯ್ದಿರಿಸಿದೆ.
2012ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸಾಕ್ಷ್ಯಾಧಾರ ಸಂಗ್ರಹಿಸಿ ಈ ಮೂವರು ಆರೋಪಿಗಳ ವಿರುದ್ಧ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಫೆ.23ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮೂವರು ಆರೋಪಿಗಳನ್ನೂ ದೋಷಿಗಳೆಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಫೆ.27ಕ್ಕೆ ಕಾಯ್ದಿರಿಸಿದೆ. ಸರ್ಕಾರದ ಪರ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕ ಸಿ.ಎ.ರವೀಂದ್ರ ಹಾಗೂ ತನಿಖಾಧಿಕಾರಿಗಳ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಭಯೋತ್ಪಾದಕ ಸಂಚು ಪ್ರಕರಣ: ಇಬ್ಬರು ಶಂಕಿತರ ವಿಚಾರಣೆ ನಡೆಸಿದ ಎನ್ಐಎ