ಕರ್ನಾಟಕ

karnataka

ETV Bharat / state

Yoga: ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಲು ವಿಧಾನಸಭೆ ಸ್ಪೀಕರ್ ಕಾಗೇರಿ ಕರೆ

ಯೋಗಾಸನ ಎಂಬುದು ಕೇವಲ ದೈಹಿಕ ಪರಿಶ್ರಮ ಮಾತ್ರವಲ್ಲ, ದೇಹ ಮತ್ತು ಮನಸ್ಸಿನ ನಡುವಿನ ಸಾಮರಸ್ಯದ ಸಾಧನ, ಆಲೋಚನೆ, ಕ್ರಿಯೆ ಮತ್ತು ನಿಗ್ರಹಗಳ ನಡುವಿನ ಕೊಂಡಿಯಾಗಿದ್ದು, ವಿಜ್ಞಾನ ಮತ್ತು ತತ್ವಶಾಸ್ತ್ರಗಳ ಸಮಾಗಮವಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

kageri
kageri

By

Published : Jun 21, 2021, 7:39 PM IST

ಬೆಂಗಳೂರು:ಯೋಗಾಸನದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಪ್ರತಿಪಾದಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನಿತ್ಯದ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವಂತೆ ತಮ್ಮ ಸಿಬ್ಬಂದಿ ಕರೆ ನೀಡಿದ್ದಾರೆ.

ವಿಧಾನಸಭೆ ಸಚಿವಾಲಯ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಯೋಗಾಸನ ಎಂಬುದು ಕೇವಲ ದೈಹಿಕ ಪರಿಶ್ರಮ ಮಾತ್ರವಲ್ಲ, ದೇಹ ಮತ್ತು ಮನಸ್ಸಿನ ನಡುವಿನ ಸಾಮರಸ್ಯದ ಸಾಧನ, ಆಲೋಚನೆ, ಕ್ರಿಯೆ ಮತ್ತು ನಿಗ್ರಹಗಳ ನಡುವಿನ ಕೊಂಡಿಯಾಗಿದ್ದು, ವಿಜ್ಞಾನ ಮತ್ತು ತತ್ತ್ವ ಶಾಸ್ತ್ರಗಳ ಸಮಾಗಮವಾಗಿದೆ" ಎಂದು ಅಭಿಪ್ರಾಯಪಟ್ಟರು.

ಭಾರತವು ಜಾಗತಿಕ ಸಮುದಾಯಕ್ಕೆ ಖಗೋಳ ವಿಜ್ಞಾನ, ವಿಜ್ಞಾನ ಮತ್ತು ಗಣಿತದ ಜತೆಗೆ ನೀಡಿದ ಮಹತ್ತರ ಕೊಡುಗೆಯೇ ಯೋಗಾಸನ. ಯೋಗಾಸನ ಮನುಷ್ಯನ ಮಾನಸಿಕ ಮತ್ತು ದೈಹಿಕ ರೋಗ ರುಜಿನಗಳನ್ನು ದೂರಾಗಿಸುವ ಶಕ್ತಿ ಜತೆಗೆ ಜೀವನ ಕೌಶಲ್ಯಗಳನ್ನು ಕಲಿಸಿಕೊಡುವ ಅಪ್ರತಿಮ ಸಾಧನವಾಗಿದೆ ಎಂದು ಸ್ಪೀಕರ್ ಬಣ್ಣಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉತ್ಸಾಹ ಭರಿತ ಪ್ರಯತ್ನಗಳಿಂದಾಗಿ ಜೂನ್ 21ನ್ನು ವಿಶ್ವ ಸಂಸ್ಥೆಯು "ಅಂತಾರಾಷ್ಟ್ರೀಯ ಯೋಗ ದಿನ"ವನ್ನಾಗಿ ಪ್ರಕಟಿಸಿದೆ ಎಂದರು.

ಯೋಗ ತಜ್ಞ ಮಂಜುನಾಥ್ ದರ್ಬೆ ಮಾತನಾಡಿ, ಪ್ರಾಣಾಯಾಮದ ಲಾಭಗಳನ್ನು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರಿಗೆ ತಿಳಿಸಿದರಲ್ಲದೇ, ಯೋಗಾಸನವನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.

ABOUT THE AUTHOR

...view details