ನೈರುತ್ಯ ರೈಲ್ವೆ ಇಲಾಖೆಯಲ್ಲಿ (SWR) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ವಿಭಾಗದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಘಟಕ ಮುಂದಾಗಿದೆ. ಒಟ್ಟು 904 ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಂದು ವರ್ಷದ ಗುತ್ತಿಗೆ ಅವಧಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ ಐಟಿಐ ಶಿಕ್ಷಣ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಈಗಾಗಲೇ ರೈಲ್ವೆ ಇಲಾಖೆಯಲ್ಲಿ ತರಬೇತಿಯಲ್ಲಿರುವ ಅಭ್ಯರ್ಥಿಗಳು ಅರ್ಹರಲ್ಲ.
ಹುದ್ದೆಗಳ ಯಾವುವು? :ರೈಲ್ವೆಯ ಮೂರು ವಿಭಾಗಗಳಲ್ಲಿ ಫಿಟ್ಟರ್, ವೆಲ್ಡರ್, ಮೆಕಾನಿಸ್ಟ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಪೈಂಟರ್, ಸ್ಟೆನೋಗ್ರಾಫರ್, ಪ್ರೊಗ್ರಾಮಿಂಗ್ ಆ್ಯಂಡ್ ಸಿಸ್ಟಂ ಅಡ್ಮಿನಿಸ್ಟ್ರೇಷನ್, ಅಸಿಸ್ಟೆಂಟ್ ಅಪ್ರೆಂಟಿಸ್. ಹುಬ್ಬಳ್ಳಿ ವಿಭಾಗದಲ್ಲಿ ಒಟ್ಟು 237, ಹುಬ್ಬಳ್ಳಿಯ ಕ್ಯಾರೇಜ್ ರಿಪೇರಿ ವರ್ಕ್ಶಾಪ್ನಲ್ಲಿ 217, ಬೆಂಗಳೂರು ವಿಭಾಗದಲ್ಲಿ 230, ಮೈಸೂರು ವಿಭಾಗದಲ್ಲಿ 177, ಮೈಸೂರು ಸೆಂಟ್ರಲ್ ವರ್ಕ್ಶಾಪ್ನಲ್ಲಿ 43 ಹುದ್ದೆಗಳಿವೆ.
ವಿದ್ಯಾರ್ಹತೆ: 10ನೇ ತರಗತಿ, ಐಟಿಐ ಅಥವಾ ಎನ್ಟಿಸಿ ಪೂರ್ಣಗೊಳಿಸಿರಬೇಕು.