ಕರ್ನಾಟಕ

karnataka

ETV Bharat / state

ಬೆಂಗಳೂರು: ಲಾಟರಿ ಟಿಕೆಟ್​ ಮೂಲಕ ಮನೆ ಹಂಚಿಕೆ... - ರಾಜ್ಯ ವಸತಿ ಸಚಿವರಾದ ವಿ ಸೋಮಣ್ಣ

ಮಾರತ್ತಹಳ್ಳಿ ಸ್ಲಂ ಬೋರ್ಡ್ ವತಿಯಿಂದ ನಿರ್ಮಿಸಿದ ಮನೆಗಳನ್ನು ಲಾಟರಿ ಮೂಲಕ ಹಂಚಿದ ಶಾಸಕ ಅರವಿಂದ ಲಿಂಬಾವಳಿ.

MLA Aravinda limbavali
ಲಾಟರಿ ಟಿಕೆಟ್​ ಮೂಲಕ ಮನೆ ಹಂಚಿಕೆ...

By

Published : Nov 22, 2022, 10:27 PM IST

ಮಹದೇವಪುರ(ಬೆಂಗಳೂರು):ಮಹದೇವಪುರವಿಧಾನಸಭಾ ಕ್ಷೇತ್ರದ ಮಾರತ್ತಹಳ್ಳಿ ಬಿಜೆಪಿ ಕಚೇರಿಯಲ್ಲಿ, ಸ್ಲಂ ಬೋರ್ಡ್ ವತಿಯಿಂದ ನಿರ್ಮಿಸಿರುವ ಮನೆಗಳ ಫಲಾನುಭವಿಗಳಿಗೆ ಲಾಟರಿ ಮೂಲಕ ಟೋಕನ್ ಹಂಚಿಕೆ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಅರವಿಂದ್ ಲಿಂಬಾವಳಿ, ಸ್ಲಂ ಬೋರ್ಡ್ ವತಿಯಿಂದ ನಿರ್ಮಿಸಿರುವ ಮನೆಗಳ ಫಲಾನುಭವಿಗಳನ್ನು ಅಭಿನಂದಿಸಿ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಂಡು ಮಾದರಿಯಾಗಿ ಎಂದು ಕಿವಿ ಮಾತು ಹೇಳಿದರು.

ಹಾಗೆಯೇ ಇಂತಹ ಜನೋಪಯೋಗಿ ಕಾರ್ಯ ನಡೆಸಲು ಸಂಪೂರ್ಣ ಸಹಕಾರ ನೀಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ರಾಜ್ಯ ವಸತಿ ಸಚಿವರಾದ ವಿ ಸೋಮಣ್ಣ ಅವರಿಗೆ ಧನ್ಯವಾದಗಳನ್ನು ತಿಳಿಸಲಾಯಿತು.

ಇದನ್ನೂಓದಿ:5.86 ಲಕ್ಷ ವಿಶೇಷ ಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ವಿತರಣೆ: ಸಚಿವ ಡಾ.ಕೆ.ಸುಧಾಕರ್

ABOUT THE AUTHOR

...view details