ಬೆಂಗಳೂರು: ದೇಶದ್ರೋಹ ಹೇಳಿಕೆ ನೀಡಿರುವ ಅಮೂಲ್ಯಳ ವಿಚಾರಣೆಯ ನಂತರ ಈಗ ಆಕೆಯ ಸ್ನೇಹಿತರನ್ನು ವಿಶೇಷ ಪೊಲೀಸ್ ತಂಡ ವಿಚಾರಣೆಗೆ ಒಳಪಡಿಸಿದೆ.
ದೇಶದ್ರೋಹ ಹೇಳಿಕೆ: ಎಸ್‌ಐಟಿಯಿಂದ ಅಮೂಲ್ಯ ಸ್ನೇಹಿತರ ವಿಚಾರಣೆ - ಪಾಕ್ ಪರ ಘೋಷಣೆ
ಅಮೂಲ್ಯ ಸ್ನೇಹಿತರು ಎನ್ನಲಾದ ಮೂವರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಲಾಗಿದ್ದು, ಆಕೆಯ ಹಿನ್ನೆಲೆ, ಎಷ್ಟು ವರ್ಷಗಳಿಂದ ಪರಿಚಯ, ಯಾರ ಜೊತೆ ಹೆಚ್ಚು ಒಡನಾಟ ಹೊಂದಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಅಮೂಲ್ಯ
ನಗರ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ನೇತೃತ್ವದ ಎಸ್ಐಟಿ ತಂಡ ಪ್ರಕರಣದ ಕೂಲಂಕಶ ತನಿಖೆಗೆ ಮುಂದಾಗಿದೆ.
ಪ್ರಕರಣದಲ್ಲಿ ಕಾರ್ಯಕ್ರಮ ಆಯೋಜಕರ ಪೈಕಿ ಓರ್ವನಾದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷ ಅವರನ್ನು ನಿನ್ನೆ ಏಳು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ಕೂಡ ಅವರು ವಿಚಾರಣೆಗೆ ಹಾಜರಾಗಿಲ್ಲ. ಬಂಧನ ಭೀತಿಯಿಂದ ಇಮ್ರಾನ್ ಪಾಷಾ ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.